ಭೂಪಾಲ್: ಪ್ರಾಚೀನ ಭಾರತ ಮತ್ತು ಆಧುನಿಕ ಯುಗದ ನಡುವೆ ಸೇತುವೆಯಾಗಿ ಈ ಯೋಗ ದಿನ ಕೆಲಸ ಮಾಡುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯ ಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭೂಪಾಲ್ ನ ಲಾಲ್ ಪರೇಡ್ ಮೈದಾನದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ಭೂಪಾಲ್ ನಲ್ಲಿ ನಾನು ನೂರಾರು ಮಂದಿ ಯೋಗ ಉತ್ಸಾಹಿಗಳನ್ನು ನೋಡಿದೆ ಎಂದು ಹೇಳಿದರು.
ಈ ವೇಳೆ ಪ್ರಧಾನಿ ಮೋದಿಯವರ ಸಾಧನೆಯನ್ನು ಕೊಂಡಾಡಿದ ಅವರು ಈ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಮಧ್ಯಪ್ರದೇಶ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಕಾಲು ಮುರಿದಿದ್ದರೂ ಸಹ ರಾಜ್ಯ ಗೃಹ ಸಚಿವ ಬಾಬುಲಾಲ್ ಗೌರ್ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಪ್ರತಿದಿನ ಭಗವದ್ಗೀತೆಯನ್ನು ಓದುತ್ತೇನೆ ಮತ್ತು ಯೋಗಾ ಮಾಡುತ್ತೇನೆ. ಇವೆರಡು ನನ್ನ ದಿನನಿತ್ಯದ ಅಭ್ಯಾಸಗಳು ಎಂದರು.