ದೇಶ

ಇನ್ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಗೂ ಸಿಗುತ್ತೆ ಹೆರಿಗೆ ರಜೆ, ವಿಮೆ ಸೌಲಭ್ಯ

Shilpa D

ನವದೆಹಲಿ: ಇನ್ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಜೀವ ವಿಮೆ, 180 ದಿನಗಳ ಹೆರಿಗೆ ರಜೆ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಕಟಿಸಿದೆ.

ಅಂಗನವಾಡಿ ಕಾರ್ಯಕರ್ತೆಯರ ವಿಮಾ ಯೋಜನೆಯಡಿ ಪೂರ್ಣ ಕಂತನ್ನು ಸರ್ಕಾರವೇ ಭರಿಸಲು ನಿರ್ಧರಿಸಿದೆ. ಹಿಂದೆ ಕೇಂದ್ರ ಸರ್ಕಾರ. 200 ಮತ್ತು ಕಾರ್ಯಕರ್ತೆಯರು 80 ಭರಿಸಬೇಕಾಗಿತ್ತು. ಆದರೆ ಇನ್ನು ಮುಂದೆ 280 ರು ಗಳನ್ನು ಸರ್ಕಾರವೇ ಭರಿಸಲಿದೆ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು 180 ದಿನಗಳ ಹೆರಿಗೆ ರಜೆ ಪಡೆಯುವುದರ ಜತೆಗೆ ವರ್ಷಕ್ಕೆ ಎರಡು ಸಮವಸ್ತ್ರ ಸೀರೆಯನ್ನೂ ಪಡೆಯಲಿದ್ದಾರೆ.

ಕಾರ್ಯಕರ್ತೆಯರ ಮಕ್ಕಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ 300 ವಿದ್ಯಾರ್ಥಿ ವೇತನ ನೀಡಲು ಸಚಿವಾಲಯ ನಿರ್ಧರಿಸಿದೆ. ಈ ನಿಯಮವು 9ನೇ ವರ್ಗದಿಂದ 12ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ.

ಶೇಕಡ 50ರಷ್ಟು ಮೇಲ್ವಿಚಾರಕರ ಹುದ್ದೆಗಳನ್ನು 10 ವರ್ಷಗಳ ಅನುಭವ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮೀಸಲಿಡಬೇಕು ಎಂದು ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.

SCROLL FOR NEXT