ದೇಶ

ಡಿಜಿಟಲ್ ಟೆರೆಸ್ಟ್ರಿಯಲ್ ಪ್ರಸಾರ ಸೇವೆ: ಪಾಲುದಾರರ ಪ್ರತಿಕ್ರಿಯೆ ಕೇಳಿದ ಟ್ರಾಯ್

Srinivas Rao BV

ನವದೆಹಲಿ: ಡಿಜಿಟಲ್ ಟೆರೆಸ್ಟ್ರಿಯಲ್ ಸೇವೆಯನ್ನು ಖಾಸಗಿ ಸಂಸ್ಥೆಗಳಿಗೂ ಒದಗಿಸುವ ಬಗ್ಗೆ ಟ್ರಾಯ್ ತನ್ನ ಪಾಲುದಾರರ ಪ್ರತಿಕ್ರಿಯೆ ಕೇಳಿದೆ. ಖಾಸಗಿ ವಲಯದಲ್ಲೂ ಡಿಜಿಟಲ್ ಟೆರೆಸ್ಟ್ರಿಯಲ್ ಸೇವೆಗೆ ಅವಕಾಶ ನೀಡುವ ಉದ್ದೇಶದ ಬಗ್ಗೆ ಸಮಾಲೋಚನೆಗೆ ಟ್ರಾಯ್ ಮುಂದಾಗಿದೆ. ಈಗಿರುವ ಖಾಸಗಿ ಡಿಜಿಟಲ್ ಟಿವಿ ವಿತರಣಾ ವ್ಯವಸ್ಥೆಯಲ್ಲಿ  ಡಿಜಿಟಲ್ ಟೆರೆಸ್ಟ್ರಿಯಲ್ ದೂರದರ್ಶನ ಸೇವೆಯನ್ನು ಒದಗಿಸುವ ಕಾರ್ಯಸಾಧ್ಯತೆ, ಟೆರೆಸ್ಟ್ರಿಯಲ್ ಟಿವಿ ಜಾಲಗಳನ್ನು ಡಿಜಿಟೈಸೇಷನ್ ಮಾಡುವ ಬಗ್ಗೆಯೂ ಟ್ರಾಯ್ ಸುದೀರ್ಘ ಚರ್ಚೆ ನಡೆಸಲಿದೆ.

ಟ್ರಾಯ್ ಜುಲೈ 22 ರ ವೇಳೆಗೆ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ. ಟಿವಿ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ದೊರದರ್ಶನ ಡಿಜಿಟಲ್ ಟೆರೆಸ್ಟ್ರಿಯಲ್ ದೂರದರ್ಶನ ಸೇವೆಯನ್ನು ಪ್ರಾರಂಭಿಸಿತ್ತು. ಈಗ ಖಾಸಗಿ ಚಾನೆಲ್ ಗಳನ್ನು ಇದೆ ಮಾದರಿಯಲ್ಲಿ ಡಿಜಿಟಲ್ ಟೆರೆಸ್ಟ್ರಿಯಲ್ ಸೇವೆಗೆ ಒಳಪಡಿಸಲು ಟ್ರಾಯ್ ಚಿಂತನೆ ನಡೆಸುತ್ತಿದ್ದು, ಈ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ಕೇಳಿದೆ. ಟ್ರಾಯ್ ಸಲ್ಲಿಸಿರುವ ಪ್ರಸ್ತಾವನೆ ಪತ್ರದ ಪ್ರಕಾರ ಭಾರತದಲ್ಲಿ  869 ಖಾಸಗಿ ಉಪಗ್ರಹ ಚಾನಲ್ ಗಳಿವೆ. 26 ಚಾಣಗಳು ದೂರದರ್ಶನದಿಂದ ನಿರ್ವಹಣೆಯಾಗುತ್ತಿದ್ದು, 100 ಮಿಲಿಯನ್ ಗು ಅಧಿಕ ಕೇಬಲ್ ಟಿವಿ ಚಂದಾದಾರರಿದ್ದಾರೆ.

SCROLL FOR NEXT