ದೇಶ

ಸಾಧ್ವಿ ಪ್ರಗ್ಯಾ ಸಿಂಗ್‍ಗೆ ಸಂಕಷ್ಟ: ಜಾಮೀನು ನೀಡಲು ಎನ್ಐಎ ಕೋರ್ಟ್ ನಿರಾಕರಣೆ

Vishwanath S

ಮುಂಬೈ: ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ 2008ರ ಮಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಕಳೆದ ತಿಂಗಳು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕ್ಲೀನ್ ಚೀಟ್ ನೀಡಲು ಮುಂದಾಗಿತ್ತು ಆದರೆ ಇದೀಗ ಎನ್ಐಎ ವಿಶೇಷ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ರಾಷ್ಟ್ರೀಯ ತನಿಖಾ ದಳ ವಿಶೇಷ ಕೋರ್ಟ್ ಗೆ ಹೇಳಿತ್ತು. ಸಾಧ್ವಿ ಜಾಮೀನು ಅರ್ಜಿಗೆ ನಮ್ಮ ಆಕ್ಷೇಪಣೆ ಇಲ್ಲ ಎಂದು ಕೋರ್ಟ್ ಗೆ ಎನ್ಐಎ ಹೇಳಿದರು ಪ್ರಗ್ಯಾ ಸಿಂಗ್ ಗೆ ಜಾಮೀನು ನೀಡಲು ವಿಶೇಷ ಕೋರ್ಟ್ ನಿರಾಕರಿಸಿದೆ.

ಮಲೆಂಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಗ್ಯಾ ಸಿಂಗ್ ಸೇರಿ, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಮತ್ತು ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಅವರನ್ನು ಬಂಧಿಸಿದ್ದರು.

SCROLL FOR NEXT