ದೇಶ

ಪೌಷ್ಟಿಕಾಂಶ ಮತ್ತು ನವೀಕರಿಸಬಹುದಾದ ಇಂಧನ: ಭಾರತಕ್ಕೆ ವಿಶ್ವ ಬ್ಯಾಂಕ್ ಬೆಂಬಲ

Sumana Upadhyaya

ನವದೆಹಲಿ: ಪೌಷ್ಟಿಕಾಂಶ ಮತ್ತು ನವೀಕರಿಸಬಹುದಾದ ಇಂಧನ ಸರ್ಕಾರದ ಅಭಿಯಾನಗಳಿಗೆ ಬೆಂಬಲ, ಸಹಕಾರ ನೀಡಲು ಇರುವ ಸಾಧ್ಯತೆಯ ಮಾರ್ಗಗಳನ್ನು ಕಂಡುಹಿಡಿಯಲು ವಿಶ್ವ ಬ್ಯಾಂಕ್ ಕೈಗೊಂಡಿರುವ ಪ್ರಯತ್ನಗಳ ಕುರಿತು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯೋಂಗ್ ಕಿಮ್ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಭೇಟಿ ಮಾಡ ಚರ್ಚೆ ನಡೆಸಿದರು.

ಮೋದಿಯವರ ಜೊತೆಗಿನ ಭೇಟಿಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಜಿಮ್ ಯೋಗ್ ಕಿಮ್ ನಿನ್ನೆ ಅಂಗನವಾಡಿಯೊಂದಕ್ಕೆ ಭೇಟಿ ನೀಡಿ ಮಕ್ಕಳ ಪೌಷ್ಟಿಕ ಆಹಾರದ ಅಗತ್ಯತೆ ಬಗ್ಗೆ ಅರಿವು ಪಡೆದುಕೊಂಡರು.

ಯೋಜನೆಗಳ ಪರಾಮರ್ಶೆ ಮತ್ತು ಪೌಷ್ಟಿಕಯುತ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಕುರಿತು ಭಾರತದ ಮೊದಲ ಪ್ರಯತ್ನದ ಕುರಿತು ಅರ್ಥೈಸಿಕೊಳ್ಳುವುದು ಜಿಮ್ ಯೋಂಗ್ ಕಿಮ್ ಅವರ ಭೇಟಿಯ ಉದ್ದೇಶ ಎಂದು ವಿಶ್ವ ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದ್ದು, ಶೇಕಡಾ 26ರಷ್ಟು ವಿಶ್ವದ ಅತ್ಯಂತ ಕಡು ಬಡವರು ಹೊಂದಿರುವ ದೇಶ ಕೂಡ ಹೌದು.ಬಡತನವನ್ನು ಕೊನೆಗಾಣಿಸಲು ಮತ್ತು 2030ರ ವೇಳೆಗೆ ಬಡತನಕ್ಕೆ ಅಂತ್ಯ ಹಾಡಲು ಭಾರತಕ್ಕೆ ಉತ್ತಮ ಅವಕಾಶಗಳಿವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ಸುಧಾರಣೆಯ ಆಡಳಿತ ತಮಗೆ ಬಹಳ ಇಷ್ಟವಾಗಿದ್ದು, ಸರ್ಕಾರದ ಆದ್ಯತೆಗಳನ್ನು ಈಡೇರಿಸಲು ವಿಶ್ವ ಬ್ಯಾಂಕ್ ಹೇಗೆ ಆರ್ಥಿಕ ಮತ್ತು ಜ್ಞಾನದ ಸಹಕಾರವನ್ನು ನೀಡಬಹುದು ಎಂಬುದನ್ನು ಭೇಟಿ ವೇಳೆ ಅರ್ಥೈಸಿಕೊಂಡೆ. ಭಾರತದ ಅಭಿವೃದ್ಧಿ ಕೆಲಸಗಳಿಗೆ ಸಹಕಾರ, ಬೆಂಬಲ ನೀಡುವುದಾಗಿ ಅವರು ಹೇಳಿದರು.

SCROLL FOR NEXT