ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಮತ್ತು ಚೀನಾ ಭಾರತ ಪ್ರಧಾನ ಮಂತ್ರಿಗಳು(ಸಂಗ್ರಹ ಚಿತ್ರ) 
ದೇಶ

ಏಷ್ಯಾ ರಾಷ್ಟ್ರಗಳ ಸಂಪರ್ಕ ಏಕಪಕ್ಷೀಯ ನಿರ್ಧಾರವಾಗಬಾರದು: ಚೀನಾಕ್ಕೆ ಭಾರತ ಸಲಹೆ

ರಸ್ತೆ ಹಾಗೂ ಸಮುದ್ರ ಮಾರ್ಗದ ಮೂಲಕ ಮಹಾತ್ವಾಕಾಂಕ್ಷೆಯ ಏಷ್ಯಾ ಸಂಪರ್ಕ ಉದ್ಯಮಕ್ಕೆ ಚೀನಾ...

ನವದೆಹಲಿ: ರಸ್ತೆ ಹಾಗೂ ಸಮುದ್ರ ಮಾರ್ಗದ ಮೂಲಕ ಮಹಾತ್ವಾಕಾಂಕ್ಷೆಯ ಏಷ್ಯಾ ಸಂಪರ್ಕ ಉದ್ಯಮಕ್ಕೆ ಚೀನಾ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ ಎಂದು ಭಾರತ ಹೇಳಿದೆ.

ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ಏಷ್ಯಾ ಖಂಡಗಳ ಸಂಪರ್ಕಕ್ಕೆ ಭಾರತದ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ಭೂ ರಾಜಕೀಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದ ಶಕ್ತಿಯನ್ನು ಬಳಸುವುದಕ್ಕೆ ಬೆದರಿಕೆಯಿರಬಾರದು. ಶಿಸ್ತು ಮತ್ತು ಸಂಯಮ ನಮ್ಮ ವರ್ತನೆಯ ಗುಣಮಟ್ಟವಾಗಿರಬೇಕು ಎಂದು ಪರೋಕ್ಷವಾಗಿ ಚೀನಾವನ್ನು ಉಲ್ಲೇಖಿಸಿ ಹೇಳಿದರು.

ದೇಶಗಳ ಮಧ್ಯೆ ಮಾರ್ಗಗಳ ಕೊಂಡಿ ಶತ್ರುತ್ವ ಭಾವವನ್ನು ದೂರ ಮಾಡಬೇಕು. ಸ್ಥಳೀಯ ಮಟ್ಟದಲ್ಲಿ ಒತ್ತಡವನ್ನುಂಟುಮಾಡಬಾರದು. ಏಷ್ಯಾ ಸಂಪರ್ಕ ಅಂತಾರಾಷ್ಟ್ರೀಯ ನೀತಿ ನಿಯಮ ಮತ್ತು ಸಂಪ್ರದಾಯಗಳನ್ನು ಬೆಸೆಯಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!