ಕೊಲ್ಕೋತಾ: ಭಾರತದಲ್ಲಿ ಯಾರಾದರೂ ದೇಶ ವಿರೋಧಿ ಘೋಷಣೆ ಕೂಗಿದರೇ ಅವರನ್ನು ಇಂಚಿಂಚಾಗಿ ಕತ್ತರಿಸುವುದಾಗಿ ಬಿಜೆಪಿ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ ಭೂಮ್ ರಾಜಧಾನಿ ಸಿಯೂರಿಯಲ್ಲಿ ಪ್ರತಿಭಟನಾ ರ್ಯಾಲಿ ಉದ್ಘಾಟಿಸಿ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಷ್ ದೇಶ ವಿರೋಧಿ ಘೋಷಣೆ ಕೂಗುವವರ ವಿರುದ್ಧ ಹರಿಹಾಯ್ದಿದ್ದಾರೆ.
ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೇ, ಅಂಥವರನ್ನು ತಲೆಯಿಂದ ಬುಡದವರೆಗೆ ಇಂಚಿಂಚಾಗಿ ಕತ್ತರಿಸುವುದಾಗಿ ಬಿರ್ ಭೂಮ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.
ಈ ವಿವಾದಾತ್ಮಕ ಹೇಳಿಕೆಯನ್ನು ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಹೇಳಿಕೆ ಜಿಲ್ಲೆಯ ಹಲವೆಡೆ ಕಿಡಿ ಹೊತ್ತಿಸಿದ್ದು, ಇಲ್ಲಮ್ ಬಜಾರ್ ಸೇರಿ ಹಲವೆಡೆ ಪೊಲೀಸ್ ಠಾಣೆ ಮತ್ತು ಹಲವು ವಾಹನಗಳನ್ನು ಜಖಂಗೊಳಿಸಲಾಗಿದೆ.