ಇಶ್ರತ್ ಜಹಾನ್, ಐಪಿಎಸ್ ಅಧಿಕಾರಿ ಸತೀಶ್ ವರ್ಮ 
ದೇಶ

ಇಶ್ರತ್ ಜಹಾನ್ ಸಾವು ಪೂರ್ವ ನಿರ್ಧರಿತ ಕೊಲೆ: ಸತೀಶ್ ವರ್ಮ

2004ರಲ್ಲಿ ಗುಜರಾತ್ ನಲ್ಲಿ ನಡೆದ ಇಶ್ರತ್ ಜಹಾನ್ ಎನ್ ಕೌಂಟರ್ ಒಂದು ಪೂರ್ವ ಯೋಜಿತ ಕೊಲೆ ಎಂದು ವಿಶೇಷ ತನಿಖಾ ತಂಡದ ಸದಸ್ಯ...

ನವದೆಹಲಿ: 2004ರಲ್ಲಿ ಗುಜರಾತ್ ನಲ್ಲಿ ನಡೆದ ಇಶ್ರತ್ ಜಹಾನ್ ಎನ್ ಕೌಂಟರ್ ಒಂದು ಪೂರ್ವ ಯೋಜಿತ ಕೊಲೆ ಎಂದು ವಿಶೇಷ ತನಿಖಾ ತಂಡದ ಸದಸ್ಯ ಐಪಿಎಸ್ ಅಧಿಕಾರಿ ಸತೀಶ್ ವರ್ಮ ಹೇಳಿದ್ದಾರೆ.

ಅಹಮದಾಬಾದ್ ಮೂಲದ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಇಶ್ರತ್ ಮತ್ತು ಇತರ ಮೂವರನ್ನು ಜೂನ್ 2004ರಲ್ಲಿ ಅಹಮದಾಬಾದ್ ನಲ್ಲಿ ಭದ್ರತಾ ಪಡೆ ಎನ್ ಕೌಂಟರ್ ಮಾಡುವ ಒಂದು ದಿನ ಮುಂಚೆ ಅಪಹರಿಸಿ ಗುಂಡಿಟ್ಟು ಸಾಯಿಸಿದರು ಎಂದು ವರ್ಮ ಹೇಳಿದ್ದಾರೆ.

ಲಷ್ಕರ್ -ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬ ಆರೋಪದ ಮೇಲೆ ಇಶ್ರತ್ ಮತ್ತು ಇತರ ಮೂವರನ್ನು ಜೂನ್ 15, 2004ರಲ್ಲಿ ಅಹಮದಾಬಾದ್ ನ ಹೊರವಲಯದಲ್ಲಿ ಹತ್ಯೆ ಮಾಡಲಾಗಿತ್ತು.

ನನ್ನ ಮೇಲೆ ಒತ್ತಡ ಹೇರಿ ಹಿಂಸೆ ನೀಡಲಾಗಿತ್ತು ಎಂದು ಗೃಹ ಇಲಾಖೆಯ ಮಾಜಿ ಅಧೀನ ಕಾರ್ಯದರ್ಶಿ ಆರ್ ವಿಎಸ್ ಮಣಿಯವರ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಇದೊಂದು ತಪ್ಪಾದ ಮತ್ತು ಆಧಾರರಹಿತ ಆರೋಪವಾಗಿದ್ದು, ಕೇಸನ್ನು ದುರ್ಬಲಗೊಳಿಸಲು ಹೀಗೆ ಆರೋಪ ಮಾಡುತ್ತಿದ್ದಾರೆ. ಇವರ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಇಶ್ರತ್ ಜಹಾನ್ ಲಷ್ಕರ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಹಲವು ಸಿಬಿಐ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಕೇಸುಗಳಿಂದ ಗಮನವನ್ನು ಬೇರೆಡೆಗೆ ಹರಿಸುವುದು ಅವರ ಉದ್ದೇಶವಾಗಿದೆ. ಆರೋಪಟ್ಟಿಯಲ್ಲಿರುವ ಸತ್ಯಾಸತ್ಯತೆಯನ್ನು ನಾಶಪಡಿಸಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ತಮಗೆ ಒತ್ತಡ ಮತ್ತು ಹಿಂಸೆ ನೀಡಲಾಗಿದೆ ಎಂದು ಆರ್ ವಿಎಸ್ ಮಣಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವರ್ಮ, ಆರೋಪವನ್ನು ಪುರಸ್ಕರಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಎರಡನೆಯದಾಗಿ ಪೊಲೀಸರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಾಗ, ಅವರು ಸಹಿಗಳನ್ನು ತೆಗೆದುಕೊಳ್ಳುವುದಿಲ್ಲ. ಆರ್ ವಿಎಸ್ ಮಣಿಯವರು ಕೂಡ ಪ್ರಮುಖ ಸಾಕ್ಷಿಯಾಗಿದ್ದು, ಅವರನ್ನು ಸಹಿ ಹಾಕುವಂತೆ ಒತ್ತಡ ಹೇರುವ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ ಮತ್ತು ಇತರ ಮಾಜಿ ಅಧಿಕಾರಿಗಳು ಕೆಲವು ವಾರಗಳ ಹಿಂದೆ, ಭದ್ರತಾ ದಳ ಯಶಸ್ವಿ ಎನ್ ಕೌಂಟರ್ ನಡೆಸಿತ್ತು ಎಂದು ಪ್ರತಿಪಾದಿಸಿದ ಹಿನ್ನಲೆಯಲ್ಲಿ ಐಪಿಎಸ್ ಅಧಿಕಾರಿ ಸತೀಶ್ ವರ್ಮ ಅವರ ಹೇಳಿಕೆ ಮಹತ್ವ ಪಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

ಪಶ್ಚಿಮ ಬಂಗಾಳ: ಇಬ್ಬರಿಗೆ ನಿಪಾ ವೈರಸ್ ಪಾಸಿಟಿವ್, ನರ್ಸ್‌ಗಳ ಸ್ಥಿತಿ ಗಂಭೀರ

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

SCROLL FOR NEXT