ನವದೆಹಲಿ: ಆಧುನಿಕರಣದ ಭಾಗವಾಗಿ ಅಂಚೆ ಇಲಾಖೆ ಮಾರ್ಚ್ 2017ರ ವೇಳೆಗೆ ದೇಶಾದ್ಯಂತ ಗ್ರಾಮೀಣ ಭಾಗದ 129, 323 ಅಂಚೆ ಕಚೇರಿಗಳನ್ನು ಗಣಕೀಕರಣಗೊಳಿಸುವುದಾಗಿ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಆಧುನಿಕರಣ ಯೋಜನೆಗೆ ಅಂಗೀಕಾರ ನೀಡಿದ್ದು, 155,000 ಅಂಚೆ ಕಚೇರಿಗಳ ಗಣಕೀಕರಣಕ್ಕೆ ಹಾಗೂ ಸಂಪರ್ಕ ಜಾಲಕ್ಕಾಗಿ 4,909 ಕೋಟಿ ರುಪಾಯಿ ನೀಡಿದೆ ಎಂದು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದರು.
ಈ ಆಧುನಿಕರಣ ಯೋಜನೆ ಎಲ್ಲಾ ಅಂಚೆ ಮೇಲ್, ಖಾತೆ ಹಾಗೂ ಆಡಳಿತವನ್ನು ಗಣಕೀಕರಣ ಮತ್ತು ಸಂಪರ್ಕ ಜಾಲವನ್ನು ಕಲ್ಪಿಸಲಿದೆ ಎಂದು ಅವರು ತಿಳಿಸಿದರು. ಅಲ್ಲದೆ ಈ ಯೋಜನೆ ಎಟಿಎಂ, ಕಾಲ್ ಸೆಂಟರ್ , ಉದ್ಯೋಗಿಗಳ ಸಹಾಯವಾಣಿ ಹಾಗೂ ಸಿಎಂಎಸ್ ವ್ಯವಸ್ಥೆಯನ್ನು ಒದಗಿಸಲಿದೆ ಎಂದರು.