ನಗಾಂವ್ ಪ್ರದೇಶಯಲ್ಲಿ ಆಯೋಜನೆ ಮಾಡಲಾಗಿದ್ದ ರ್ಯಾಲಿಯಲ್ಲಿ ರಾಹುಲ್ ಗಾಂಧಿ 
ದೇಶ

ಹಿಂದೂಸ್ತಾನ ನನ್ನ ರಕ್ತದಲ್ಲಿದೆ: ರಾಹುಲ್ ಗಾಂಧಿ

ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಾರೆ. ನಾನು ದೇಶಕ್ಕಾಗಿ ದುಡಿಯುತ್ತಿರುವವನು, ಹಿಂದೂಸ್ತಾನವೆಂಬುದು ನನ್ನ ರಕ್ತದಲ್ಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ...

ಗುವಾಹಟಿ: ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಾರೆ. ನಾನು ದೇಶಕ್ಕಾಗಿ ದುಡಿಯುತ್ತಿರುವವನು, ಹಿಂದೂಸ್ತಾನವೆಂಬುದು ನನ್ನ ರಕ್ತದಲ್ಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂ ನಗಾಂವ್ ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು, ತಮ್ಮ ವಿರುದ್ಧ ಹೂಡಲಾಗಿರುವ ದೇಶವಿರೋಧಿ ಪ್ರಕರಣ ಸಂಬಂಧ ಕಿಡಿಕಾರಿದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ನನ್ನ ವಿರುದ್ಧ ದೇಶವಿರೋಧಿ ಪ್ರಕರಣವನ್ನು ದಾಖಲಿಸಲಾಗಿದೆ. ನಾನು ದೇಶಕ್ಕಾಗಿ ದುಡಿಯುತ್ತಿರುವವನು. ನನ್ನ ಕುಟುಂಬದ ಇಬ್ಬರು ಸದಸ್ಯರನ್ನು ಹತ್ಯೆ ಮಾಡಲಾಗಿದೆ. ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಾರೆ. ನನ್ನ ರಕ್ತದಲ್ಲಿಯೇ ಹಿಂದೂಸ್ತಾನವಿದೆ ಎಂದು ಹೇಳಿದ್ದಾರೆ.

ಇಂದು ದೇಶದ ಜನತೆ ಬಡತನದೊಂದಿಗೆ ಪ್ರತಿದಿನ ಹೋರಾಡುತ್ತಿದ್ದಾರೆ. ಆದರೆ, ಬ್ರಾಂಡೆಡ್ ದೇಶದ್ರೋಹಿಗಳು ಶ್ರೀಮಂತರ ಪರವಾಗಿ ನಿಂತು ಆಯ್ಕೆ ಮಾಡಿಕೊಂಡ ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ದೇಶಪ್ರೇಮಿಗಳೆಂದು ಹೇಳಲಾಗುತ್ತಿದೆ ಎಂದರು.

ಇದೇ ವೇಳೆ ಮನ್ರೇಗಾ ಯೋಜನೆ ಕುರಿತಂತೆ ಪರೋಕ್ಷವಾಗಿ ಮೋದಿ ವಿರುದ್ಧ ದಾಳಿ ಮಾಡಿದ ಅವರು, 2014ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಮೋದಿಯವರು ಸಂಸತ್ತಿನಲ್ಲಿ ನಿಂತು ಮನ್ರೇಗಾದಂತಹ ಕೆಲಸಕ್ಕೆ ಬಾರದ ಯೋಜನೆಯನ್ನು ಎಂದೂ ನೋಡಿಲ್ಲ ಎಂದು ಹೇಳಿದ್ದರು. ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವರನ್ನು ಯೋಜನೆ ಕುರಿತಂತೆ ಮಾತನಾಡಿದಾಗ ಯುಪಿಎ ಸರ್ಕಾರದ ಅವಧಿಯಲ್ಲಿ ಬಂದ ಮನ್ರೇಗಾ ಯೋಜನೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂದು ಹಳ್ಳಿಯ ಜನರಿಗೆ ಮನ್ರೇಗಾ ಯೋಜನೆ ಮುಖಾಂತರ ಹಣ ತಲುಪುತ್ತಿದೆ. ಯೋಜನೆಯನ್ನು ನಿಲ್ಲಿಸುವುದಿಲ್ಲ. ಯೋಜನೆಗೆ ಮತ್ತಷ್ಟು ಹಣವನ್ನು ಹೂಡಿಕೆ ಮಾಡಲಾಗುವುದು ಎಂದು ಹೇಳಿದ್ದರು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಅಸ್ಸಾಂ ರ್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು ಜೆಎನ್ ಯು ವಿವಾಹ ಹಾಗೂ ಹೈದರಾಬಾದ್ ದಲಿತ ವಿದ್ಯಾರ್ಥಿ ರೋಹಿತ್ ವೆಮುಲ ಪ್ರಕರಣ ಸಂಬಂಧ ಮಾತನಾಡಿ, ಇಂದು ದೇಶದಲ್ಲಿರುವ ಕಾಲೇಜು ಹಾಗೂ ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳ ಮೇಲೆ ಆರ್ಎಸ್ಎಸ್ ತನ್ನ ಸಿದ್ದಾಂತವನ್ನು ಹೇರುವ ಪ್ರಯತ್ನ ಮಾಡುವ ಮೂಲತ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಎಂದಿಗೂ ಈ ಪ್ರಯತ್ನ ಯಶಸ್ವಿಯಾಗಲು ಬಿಡುವುದಿಲ್ಲ. ದೇಶದಲ್ಲಿರುವ ಪ್ರತಿಯೊಬ್ಬರಿಗೂ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವ ಹಕ್ಕನ್ನು ಬಯಸುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT