ಕೋಲ್ಕತ್ತಾ: ಇಪ್ಪತ್ನಾಲ್ಕು ಗಂಟೆಗಳೊಳಗೆ ಬಾಂಬ್ ಸಿಡಿಯುತ್ತದೆ ಎಂದು ಇಮೇಲ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಬೆದರಿಕೆ ಸಂದೇಶ ವಿಮಾನ ನಿಲ್ದಾಣದ ವ್ಯವಸ್ಥಾಪಕರ ಇಮೇಲ್ ಐಡಿಗೆ ಇಂದು ಬೆಳಗ್ಗೆ ಬಂದಿದ್ದು ಇದು ಜರ್ಮನಿಯಿಂದ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಸೈಬರ್ ಅಪರಾಧ ತಂಡದವರು ಮೇಲ್ ನಲ್ಲಿನ ವಿಷಯದ ನಿಖರತೆಯನ್ನು ಪರೀಕ್ಷಿಸುತ್ತಿದ್ದು ನಿಲ್ದಾಣದ ಸುತ್ತಮುತ್ತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪ್ರಯಾಣಿಕರ ಲಗ್ಗೇಜು ಮತ್ತು ಕಾರುಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿಯೇ ಕಳುಹಿಸಲಾಗುತ್ತಿದೆ.