ತ್ರ್ಯಂಬಕೇಶ್ವರ ದೇವಸ್ಥಾನ ಮತ್ತು ಬಲ ಚಿತ್ರದಲ್ಲಿ ತೃಪ್ತಿ ದೇಸಾಯಿ 
ದೇಶ

ಶಿಂಗಣಾಪುರ ಆಯ್ತು; ಇದೀಗ ನಾಶಿಕ್ ನ ತ್ರ್ಯಂಬಕೇಶ್ವರ ಗರ್ಭಗುಡಿ ಪ್ರವೇಶಿಸಲು ಹೊರಟ ಮಹಿಳೆಯರು

ಮಹಾರಾಷ್ಟ್ರದಲ್ಲಿರುವ ಶನಿ ಶಿಂಗಣಾಪುರ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕೆಂದು ಆಂದೋಲನ...

ನವದೆಹಲಿ: ಮಹಾರಾಷ್ಟ್ರದಲ್ಲಿರುವ ಶನಿ ಶಿಂಗಣಾಪುರ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕೆಂದು ಆಂದೋಲನ ನಡೆಸಿದ್ದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶ ವಿವಾದ ಮತ್ತೆ ಕೇಳಿಬರುತ್ತದೆ.

ಮಹಾ ಶಿವರಾತ್ರಿಯ ಪರ್ವ ದಿನದಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೆ ಭೂಮಾತಾ ಬ್ರಿಗೇಡ್‌ನ‌ ಮಹಿಳಾ ಆಂದೋಲನಕಾರರು ತೃಪ್ತಿ ದೇಸಾಯಿ ಕಾರ್ಯಕರ್ತೆಯ ನೇತೃತ್ವದಲ್ಲಿ ಪಾದಯಾತ್ರೆ ಹೊರಟಿದ್ದಾರೆ.

ನಾಶಿಕ್‌ನಿಂದ 30 ಕಿಲೋ ಮೀಟರ್ ದೂರದಲ್ಲಿರುವ  ತ್ರ್ಯಂಬಕೇಶ್ವರ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇಲ್ಲಿನ ಗರ್ಭಗುಡಿಯನ್ನು ಧಾರ್ಮಿಕ ಪರಂಪರೆ ಮತ್ತು ಕಟ್ಟುಕಟ್ಟಳೆಯ ಪ್ರಕಾರ ಬಹಳ ಹಿಂದಿನಿಂದಲೂ ಮಹಿಳೆಯರು ಪ್ರವೇಶಿಸುವಂತಿಲ್ಲ. ಇದೀಗ ಮಹಾ ಶಿವರಾತ್ರಿಯ ಪರ್ವ ದಿನದಂದು ತ್ರ್ಯಂಬಕೇಶ್ವರ ದೇವಳದ ಗರ್ಭಗುಡಿ ಪ್ರವೇಶಿಸುವ ಸಂಕಲ್ಪವನ್ನು ಮಹಿಳೆಯರು ತಳೆದಿದ್ದಾರೆ. ಅದಕ್ಕಾಗಿ ಸುಮಾರು 150ರಿಂದ 200 ಮಂದಿ ಭೂಮಾತಾ ಬ್ರಿಗೇಡ್‌ನ‌ ಆಂದೋಲನಕಾರರು ತ್ರ್ಯಂಬಕೇಶ್ವರ ದೇಗಲಕ್ಕೆ ಪಾದಯಾತ್ರೆ ಹೊರಟಿದ್ದಾರೆ.

"ನಾವಿಂದು ಮಹಾ ಶಿವರಾತ್ರಿಯ ಪರ್ವ ದಿನದಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡು ಅಲ್ಲಿ ದೇವಳದ ಗರ್ಭಗುಡಿಯನ್ನು ಖಂಡಿತಾ  ಪ್ರವೇಶಿಸಲಿದ್ದೇವೆ, ಪೊಲೀಸರು ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಏಕೆಂದರೆ ಸಂವಿಧಾನದಲ್ಲಿ ನಮಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ಇದೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಭೂಮಾತಾ ಬ್ರಿಗೇಡ್‌ ಕೈಗೊಂಡಿದ್ದ ಪಾದಯಾತ್ರೆಯನ್ನು ಕಳೆದ ಫೆ.10ರಂದು ಪೊಲೀಸರು ತಡೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT