ನವದೆಹಲಿ: ಫೇಸ್ಬುಕ್ನಲ್ಲಿರುವ ದೋಷವನ್ನು ಪತ್ತೆ ಹಚ್ಚುವ ಮೂಲಕ ಬೆಂಗಳೂರು ಮೂಲದ ಯುವಕನೊರ್ವ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.
ಫ್ಲಿಪ್ಕಾರ್ಟ್ ಸಂಸ್ಥೆಯಲ್ಲಿ ಭದ್ರತಾ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಪ್ರಕಾಶ್ ಫೇಸ್ ಬುಕ್ನ ಲಾಗ್ ಇನ್ ಸಿಸ್ಟ್ಂನಲ್ಲಿರುವ ದೋಷವನ್ನು ಗುರುತಿಸಿದ್ದಾರೆ.
ಫೇಸ್ ಬುಗ್ ಬಳಕೆದಾರರು ನಮೂದಿಸಿದ ಮಾಹಿತಿ, ಪೋಟೋ, ಡೆಬಿಟ್/ಕ್ರೆಡಿಟ್ ಕಾರ್ಡ್ನ ಮಾಹಿತಿ ಸೋರಿಕೆ ಆಗುತ್ತಿದ್ದು, ಸುಲಭವಾಗಿ ಹ್ಯಾಕರ್ಗಳು ಇದರ ಲಾಭ ಪಡೆಯಬಹುದಾಗಿದೆ ಎಂದು ಫೇಸ್ ಬುಕ್ ಭದ್ರತಾ ತಂಡಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಫೇಸ್ಬುಕ್ ಇದೀಗ ಸಮಸ್ಯೆಯನ್ನು ನಿವಾರಣೆ ಮಾಡಿದೆ.