ದೇಶ

ಜೂ.18 ರಿಂದ ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್ ಗಳ ಕಾರ್ಯನಿರ್ವಹಣೆ

Srinivas Rao BV

ನವದೆಹಲಿ: ಯುದ್ಧವಿಮಾನಗಳನ್ನು ಮುನ್ನಡೆಸುವ ಮೊದಲ ಮಹಿಳಾ ಪೈಲಟ್ ಗಳು ಭಾರತೀಯ ವಾಯುಪಡೆಗೆ ಜೂ.18 ರಂದು ಸೇರ್ಪಡೆಯಾಗಲಿದ್ದಾರೆ.
ತರಬೇತಿ ಪಡೆಯುತ್ತಿರುವ ಮೂವರು ಮಹಿಳೆಯರು ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ಪೈಲಟ್ ಗಳಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ ಎಂದು  ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ತಿಳಿಸಿದ್ದಾರೆ.
ಭಾವನಾ ಕಾಂತ್, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯುದ್ಧ ವಿಮಾನಗಳ ಪೈಲಟ್‌ ಗಳಾಗಿ ಜೂನ್‌ ನಿಂದ ಕಾರ್ಯಾರಂಭ ಮಾಡಲಿದ್ದಾರೆ.  ಎರಡನೇ ಹಂತದ ತರಬೇತಿಯಲ್ಲಿರುವ ಮೂವರು ಮಹಿಳೆಯರು ಜೆಟ್ ತರಬೇತಿ ಪಡೆದ ನಂತರ ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯುಪಡೆ ಈ ಹಿಂದೆ ಯುದ್ಧ ವಿಮಾನಗಳಿಗೆ ಮಹಿಳಾ ಪೈಲಟ್‌ಗಳ ನೇಮಕವನ್ನು ತಿರಸ್ಕರಿಸಿತ್ತು.

SCROLL FOR NEXT