ದೇಶ

ಹೆಲ್ಮೆಟ್ ಧರಿಸದ್ದಕ್ಕೆ ಪೊಲೀಸರಿಗೆ ಚಲನ್ ನೀಡಿದ ಹೈದರಬಾದ್ ಟ್ರಾಫಿಕ್ ಪೊಲೀಸರು

Vishwanath S

ಹೈದರಬಾದ್: ಕಾನೂನು ಮತ್ತು ಆದೇಶವನ್ನು ಅನುಷ್ಠಾನಗೊಳಿಸಬೇಕಿರುವ ಪೊಲೀಸರೇ ಕಾನೂನು ಉಲ್ಲಂಘನೆ ಮಾಡಿದರೇ? ಯಾವ ಶಿಕ್ಷೆ.

ಸಾರ್ವಜನಿಕರಿಗಾಗಿ ಪೊಲೀಸರಿಗಾಗಲಿ ಯಾರು ಕಾನೂನು ಉಲ್ಲಂಘಿಸಬಾರದು ಎಂಬ ಉದ್ದೇಶದೊಂದಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವ ಸುಪ್ರೀಂಕೋರ್ಟ್ ಆದೇಶವನ್ನು ಪರಿಪಾಲಿಸುವ ನಿಟ್ಟಿನಲ್ಲಿ ಹೈದರಬಾದ್ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸದ ಪೊಲೀಸರಿಗೆ ಚಲನ್ ನೀಡುತ್ತಿದ್ದಾರೆ.

ಚಲನ್ ಪಡೆದ ಪೊಲೀಸರು ಮೂರು ಬಾರಿ ಸಿಕ್ಕಿ ಹಾಕಿಕೊಂಡರೆ ಅವರು ಅಮಾನತು ಶಿಕ್ಷೆ ಎದುರಿಸಬೇಕಾಗುತ್ತದೆ.

ಹೆಲ್ಮೆಟ್ ಕಡ್ಡಾಯವಿದ್ದರು ಬೈಕ್ ಓಡಿಸಬೇಕಾದರೆ ಪೊಲೀಸರು ಹೆಲ್ಮೆಟ್ ಧರಿಸದನ್ನು ಸ್ಥಳೀಯರು ಫೋಟೋ ತೆಗೆದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದರು. ಫೇಸ್ ಬುಕ್ ನಲ್ಲಿ ಇದು ವೈರಲ್ ಆಗುತ್ತಿದ್ದಂತೆ ಹೈದರಬಾದ್ ಪೊಲೀಸ್ ಆಯುಕ್ತ ಎಂ ಮಹೇಂದರ್ ರೆಡ್ಡಿ ಅವರು ಪ್ರತಿಯೊಬ್ಬ ಪೊಲೀಸರು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಬಳಸಬೇಕು ಇಲ್ಲದಿದ್ದರೆ ಅಮಾನತು ಶಿಕ್ಷೆ ನೀಡುವುದಾಗಿ ಆದೇಶಿಸಿದ್ದರು.

ನಗರದಲ್ಲಿ ಸುಮಾರು 36 ಲಕ್ಷ ಬೈಕ್ ಸವಾರರಿದ್ದು, ಅದರಲ್ಲಿ ಶೇಖಡ 40ರಷ್ಟು ಚಾಲನ ಪರವಾನಗಿಯೇ ಇಲ್ಲ ಎಂದು ಹೇಳಿದ್ದಾರೆ.

SCROLL FOR NEXT