ನವದೆಹಲಿ: ಬಾಕಿ ಸಂಬಳ ನೀಡದೆ ಸತಾಯಿಸಿದ ಉದ್ಯಮಿ ವಿಜಯ್ ಮಲ್ಯ ನೇತೃತ್ವದ ಕಿಂಗ್‌ಫಿಶರ್ ಏರ್ ಲೈನ್ಸ್ ಸಂಸ್ಥೆ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದೂರು ದಾಖಲಿಸಲು ಕಿಂಗ್ ಫಿಶರ್ ನ ಮಾಜಿ ಉದ್ಯೋಗಿಗಳು ನಿರ್ಧರಿಸಿದ್ದಾರೆ.
ವಿಜಯ್ ಮಲ್ಯ ವಿವಾದಗಳಿಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಕಿಂಗ್ ಫಿಶರ್ ಏರ್ ಲೈನ್ಸ್ ನ ಮಾಜಿ ಉದ್ಯೋಗಿಗಳು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ, ಇಂದು ಕಿಂಗ್ ಫಿಶರ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಲು ಮಾಜಿ ಉದ್ಯೋಗಿಗಳು ನಿರ್ಧರಿಸಿದ್ದು, ಈ ಸಂಬಂಧ ವಕೀಲರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಉದ್ಯೋಗಿಗಳ ಹಿತದೃಷ್ಟಿಯಿಂದ ಪ್ರಧಾನಿ ಈ ವಿಷಯದಲ್ಲಿ ಮದ್ಯಪ್ರವೇಶಿಸಬೇಕೆಂದು ಇವರು ಒತ್ತಾಯಿಸಿದ್ದಾರೆ. ಇಲ್ಲಿಯವರೆಗೆ ನಮಗೆ ಸಂಬಳ ಸಿಕ್ಕಿಲ್ಲ. ಭವಿಷ್ಯ ನಿಧಿ ಮತ್ತು ಗ್ರಾಜ್ಯುವಿಟಿ ಹಣ ಇನ್ನೂ ಕೈಸೇರಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಮ್ಮಲ್ಲಿರುವ ಪ್ರಸ್ತುತ ನಿಯಮದ ಪ್ರಕಾರ ಅದು ಉದ್ಯೋಗಿಗಳ ಹಿತವನ್ನು ಕಾಪಾಡಬೇಕಿತ್ತು. ಆದರೆ ನಮಗೆ ಕೆಲಸ ಮಾಡಿದ್ದಕ್ಕೆ ಸಂಬಳ ಸಿಕ್ಕಿಲ್ಲ. ಅಷ್ಟೇ ಅಲ್ಲ ಇದರ ವಿರುದ್ಧ ನ್ಯಾಯಾಂಗ ಹೋರಾಟ ಮಾಡಲು ಹೋದರೂ, ಶುಲ್ಕ ಪಾವತಿ ಮಾಡುವಷ್ಟೂ ದುಡ್ಡು ಈ ನೌಕರರ ಕೈಯಲ್ಲಿ ಇಲ್ಲ. ಇನ್ನೂ ಕೆಲವರು ತಮಗೆ ಸಿಗಬೇಕಾಗಿದ್ದ ಹಣಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಕಿಂಗ್ ಫಿಶರ್ ಏರ್‌ಲೈನ್ಸ್ ಸ್ಥಗಿತದಿಂದಾಗಿ ಸರಿಸುಮಾರು 7,000 ನೌಕರರಿಗೆ ಸಮಸ್ಯೆಯಾಗಿದೆ. ಹೀಗೆ ಕೆಲಸ ಕಳೆದುಕೊಂಡ ನೌಕರರಲ್ಲಿ ಹೆಚ್ಚಿನವರಿಗೆ ಕಾನೂನು ಹೋರಾಟ ಮಾಡಲು ಸಾಮರ್ಥ್ಯವಿಲ್ಲದವರಿಗಾಗಿದ್ದಾರೆ. ಆದ್ದರಿಂದ ನಮಗೆ ಬಾಕಿ ಬರಬೇಕಾಗಿರುವ ಸಂಬಳದ ವಿಷಯದಲ್ಲಿ ಮದ್ಯಪ್ರವೇಶಿಸಬೇಕೆಂದು ಕಿಂಗ್‌ಫಿಶರ್ ನೌಕರರ ಪರವಾಗಿ ನಾವು ವಿನಂತಿಸುತ್ತೇವೆ ಎಂದು ಮಾಜಿ ನೌಕರರು ಪ್ರಧಾನಿಯವರಲ್ಲಿ ವಿನಂತಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos