ದೇಶ

ಲಡಾಖ್ ಗಡಿಪ್ರದೇಶದಲ್ಲಿ ಚೀನಾ ಅತಿಕ್ರಮಣ

Rashmi Kasaragodu
ನವದೆಹಲಿ: ಜಮ್ಮು ಕಾಶ್ಮೀರದ ಲಡಾಖ್‌ನಲ್ಲಿ ಚೀನಾದ ಸೇನೆ ಅತಿಕ್ರಮಣ ನಡೆಸಿರುವುದಾಗಿ ವರದಿಯಾಗಿದೆ. ಮಾರ್ಚ್ 8 ರಂದು ಭಾರತದ ಗಡಿ ದಾಟಿ 6 ಕಿಮೀ ದೂರ ನಡೆದು ಅಲ್ಲಿ ಚೀನಾದ ಸೇನೆ ಟೆಂಟ್‌ಗಳನ್ನು ನಿರ್ಮಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
ವಿಷಯ ತಿಳಿದ ಇಂಡೋ ಟಿಬೇಟನ್ ಬಾರ್ಡರ್ ಪೊಲೀಸರು ಅಲ್ಲಿಗೆ ಧಾವಿಸಿ, ಅಲ್ಲಿಂದ ಅತಿಕ್ರಮಣಕಾರರನ್ನು  ಎರಡುಗಂಟೆಗಳಲ್ಲಿ ವಾಪಸ್ ಕಳಿಸಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಚೈನೀಸ್ ಪೀಪಲ್ಸ್ ಲಿಬರೇಷನ್ ಸೇನೆಯ ಕರ್ನಲ್ ರ್ಯಾಂಕ್‌ನಲ್ಲಿರುವ ಸೈನಿಕರೊಬ್ಬರ ನೇತೃತ್ವದಲ್ಲಿ  11 ಸೈನಿಕರ ತಂಡವೊಂದು ಗಡಿ ಉಲ್ಲಂಘನೆ ಮಾಡಿ ಲಡಾಖಅನ  ಪಾನ್‌ಗೋಂಗ್ ಕಣಿವೆಯತ್ತ ನುಸಿಳಿದ್ದರು. ಪಾನ್‌ಗಾಂಗ್ ನ  45 ಕಿಮೀ ಭೂಭಾಗ ಭಾರತಕ್ಕೆ ಮತ್ತು 90 ಕಿಮೀ ಭೂಭಾಗ ಚೀನಾಕ್ಕೆ ಸೇರಿದೆ.
SCROLL FOR NEXT