ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿರುವ ನಿತಿಶ್ ಕುಮಾರ್ 
ದೇಶ

ನಿತಿಶ್ ಕುಮಾರ್ ಭಾಷಣದ ವೇಳೆ 'ಮೋದಿ ಮೋದಿ' ಘೋಷಣೆ ಕೂಗದಂತೆ ಸೂಚಿಸಿದ ಪ್ರಧಾನಿ

ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ 'ಮೋದಿ ಮೋದಿ' ಎಂದು ಘೋಷಣೆ ಕೂಗಲು ಆರಂಭಿಸಿದ ಕೆಲವು ಕಾರ್ಯಕರ್ತರಿಗೆ...

ಹಜಿಪುರ: ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ 'ಮೋದಿ ಮೋದಿ' ಎಂದು ಘೋಷಣೆ ಕೂಗಲು ಆರಂಭಿಸಿದ ಕೆಲವು ಕಾರ್ಯಕರ್ತರಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಕೂಗದೇ ಶಾಂತವಾಗಿರುವಂತೆ ಸೂಚಿಸಿದರು.
ನಿತಿಶ್ ಕುಮಾರ್ ಇಂದು ಹಜಿಪುರದಲ್ಲಿ ನಿರ್ಮಾಣವಾಗಿರುವ ನೂತನ ದಿಘಾ-ಸೋನೆಪುರ್ ರೈಲ್ ಹಾಗೂ ರಸ್ತೆ ಸೇತುವೆ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಕೆಲವರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದರು. ವೇದಿಕೆಯಲ್ಲಿದ್ದ ಪ್ರಧಾನಿ ಮೋದಿ ಅವರು ಕೂಡಲೇ ಎದ್ದು ನಿಂತು, ಘೋಷಣೆ ಕೂಗುತ್ತಿದ್ದ ಸಮೂಹವನ್ನು ಶಾಂತವಾಗಿಸಲು ಯತ್ನಿಸಿದರು. 
ಬಿಹಾರ ವಿಧಾಸಭೆ ಚುನಾವಣೆ ಸೋಲಿನ ನಂತರ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಹಾಗೂ ನಿತಿಶ್ ಕುಮಾರ್ ಅವರು ನಗು ನಗುತ್ತಲೇ ವೇದಿಕೆ ಅಲಂಕರಿಸಿದ್ದು ಕಂಡು ಬಂತು.
ಇದಕ್ಕೂ ಮುನ್ನ ದಿಘಾ-ಸೋನೆಪುರ್ ರೈಲ್ ಹಾಗೂ ರಸ್ತೆ ಸೇತುವೆ ಉದ್ಘಾಟಿಸಿ ಮಾತನಾಡಿದ ಮೋದಿ, ಭಾರತದ ಅಭಿವೃದ್ಧಿಯಲ್ಲಿ ಬಿಹಾರದ ಬೆಳವಣಿಗೆ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಭಾರತದ ಅಭಿವೃದ್ಧಿಯಲ್ಲಿ ದೇಶದ ಪೂರ್ವ ಭಾಗಗಳು ಪ್ರಮುಖ ಪಾತ್ರವಹಿಸಲಿವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!