ನವದೆಹಲಿ: ನೆರೆಯ ನೇಪಾಳ ಸೇರಿದಂತೆ ಭಾರತದ ಹಲವೆಡೆ ಭಾನುವಾರ ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರಿಂದ 4.8ರಷ್ಟು ತೀವ್ರತೆ ದಾಖಲಾಗಿದೆ.
ಭಾನುವಾರ ಮಧ್ಯಾಹ್ನ ಸುಮಾರು 4 ಗಂಟೆಯಲ್ಲಿ ಭೂಕಂಪನ ಸಂಭವಿಸಿದ್ದು, ಅಸ್ಸಾಂ ಮತ್ತು ಗುವಾಹತಿಯ ನಾಗಾಂವ್ ಪ್ರದೇಶದಲ್ಲಿ ಕಂಪನದ ಅನುಭವ ಉಂಟಾಗಿದೆ. ಒಂದು ಕ್ಷಣ ಕಂಗಾಲಾದ ಜನರು ಕೆಲ ಗಂಟೆಗಳ ಕಾಲ ಮನೆಯಿಂದಾಚೆಯೇ ಉಳಿದರು. ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವಂತೆ ಭೂಕಂಪನದ ತೀವ್ರತೆ 4.3ರಷ್ಟಿತ್ತು. ಭೂಕಂಪನ ಭಾರಿ ತೀವ್ರತೆಯಿಂದೇನು ಕೂಡಿರಲಿಲ್ಲ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ಲಘು ಭೂಕಂಪನದಲ್ಲಿ ಯಾವುದೇ ರೀತಿಯ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ನೇಪಾಳದಲ್ಲೂ ನಡುಗಿದ ಭೂಮಿ
ಇನ್ನು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲೂ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 4.8ರ ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.