ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂಖಾನ್ 
ದೇಶ

ನಾನು ಸಾಧ್ವಿ ಪ್ರಾಚಿಯನ್ನು ಪ್ರೀತಿಸುತ್ತೇನೆ: ಅಜಂಖಾನ್

ನಾನು ಸಾಧ್ವಿ ಪ್ರಾಚಿಯ್ನು ಪ್ರೀತಿಸುತ್ತಿದ್ದೇನೆ. ಹಾಗೆಂದ ಮಾತ್ರಕ್ಕೆ ಇದು ಲವ್ ಜಿಹಾದ್ ಎಂದು ತಿಳಿಯಬೇಡಿ ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂಖಾನ್...

ಆಗ್ರಾ: ನಾನು ಸಾಧ್ವಿ ಪ್ರಾಚಿಯ್ನು ಪ್ರೀತಿಸುತ್ತಿದ್ದೇನೆ. ಹಾಗೆಂದ ಮಾತ್ರಕ್ಕೆ ಇದು ಲವ್ ಜಿಹಾದ್ ಎಂದು ತಿಳಿಯಬೇಡಿ ಎಂದು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಜಂಖಾನ್ ಅವರು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಜಂಖಾನ್ ಅವರು, ನಾನು ಸಾಧ್ವಿ ಪ್ರಾಚಿಯನ್ನು ಪ್ರೀತಿಸುತ್ತೇನೆ. ಆದರೆ, ಸಾಧ್ವಿಯೇಕೆ ನನ್ನನ್ನು ದ್ವೇಷಿಸುತ್ತಾರೆ. ಈಗಲೂ ಹೇಳುತ್ತೇನೆ ನಾನು ಸಾಧ್ವಿಯನ್ನು ಪ್ರೀತಿಸುತ್ತೇನೆ. ಇದನ್ನು ಲವ್ ಜಿಹಾದ್ ಎಂದು ಹೇಳಬೇಡಿ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ಪಕ್ಷದಲ್ಲಿರುವ ಅವಿವಾಹಿತ ನಾಯಕರ ಕುರಿತಂತೆ ಕಿಡಿಕಾರಿರುವ ಅವರು, ಬಿಜೆಪಿ ಮೊದಲು ಅವಿವಾಹಿತರಿಗೆ ಮದುವೆಯನ್ನು ಮಾಡಿಸಬೇಕು. ಬಿಜೆಪಿಯಲ್ಲಿರುವ ಎಲ್ಲಾ ಅವಿವಾಹಿತರು ವಿವಾಹಗಬೇಕೆಂದು  ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಅಲ್ಲದೆ, ಯಾರ ಹೆಸರನ್ನು ಹೇಳದೆ ಪರೋಕ್ಷವಾಗಿ ಮಾತನಾಡಿದ ಅವರು, ನಾಯಕರು ಅಸಂಬದ್ಧವಾಗಿ ಮಾತನಾಡುತ್ತಿದ್ದು, ಅವರ ಒತ್ತಡಗಳನ್ನು ಹೊರಹಾಕಲು ಮದುವೆಯಾಗಬೇಕಿದೆ ಎಂದು ಹೇಳಿದ್ದಾರೆ.

ಇದರಂತೆ ಅಜಂಖಾನ್ ಅವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರು, ಸಾಧ್ವಿ ಪ್ರಾಚಿಯನ್ನು ಪ್ರೀತಿ ಮಾಡುತ್ತಿದ್ದೇನೆಂದು ಹೇಳುತ್ತಿರುವ ಅಜಂಖಾನ್ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅಜಂಖಾನ್ ಅವರು ಎಂತಹ ವ್ಯಕ್ತಿ. ಒಂದು ವೇಳೆ ಅವರ ತಾಯಿ ಹಾಗೂ ತಂಗಿಯರ ಬಗ್ಗೆಯೂ ಇದೇ ರೀತಿಯಾಗಿ ಆಲೋಚನೆ ಮಾಡಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!