ದೇಶ

ಇನ್ಮುಂದೆ ರೈಲಿನಲ್ಲಿ ಪ್ರತಿದಿನ ಒಗೆದು ಸ್ವಚ್ಛಗೊಳಿಸಿದ ಬೆಡ್‌ಶೀಟ್‌ಗಳನ್ನೇ ಬಳಸಲಾಗುವುದು

Rashmi Kasaragodu
ನವದೆಹಲಿ:  ಇನ್ಮುಂದೆ ರೈಲಿನ ಏರ್ ಕಂಡೀಷನ್ ಬೋಗಿಗಳಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ನೀಡುವ ಹೊದಿಕೆ ಗಬ್ಬುವಾಸನೆ ಬೀರುವುದಿಲ್ಲ. ಅಂದರೆ ಪ್ರತೀ ದಿನ ಒಗೆದು ಸ್ವಚ್ಛಗೊಳಿಸಿದ ಬೆಡ್‌ಶೀಟ್‌ಗಳನ್ನೇ ಪ್ರಯಾಣಿಕರಿಗೆ ಒದಗಿಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.
ಏರ್‌ಕಂಡೀಷನ್ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ದಪ್ಪ ಬೆಡ್ ಶೀಟ್‌ನ ಬದಲು ಹಗುರವಾದ ಬೆಡ್‌ಶೀಟ್‌ಗಳನ್ನು ನೀಡಲಾಗುವುದು. ಈ ಹಿಂದೆ ಎರಡು ತಿಂಗಳಿಗೊಮ್ಮೆ ಆ ಬೆಡ್ ಶೀಟ್ ಗಳನ್ನು ಒಗೆಯಲಾಗುತ್ತಿತ್ತು. ಆದರೆ ಇನ್ಮುಂದೆ ಪ್ರತಿ ದಿನ ಒಗೆದು ಶುಭ್ರಗೊಳಿಸಿದ ಬೆಡ್‌ಶೀಟ್‌ಗಳನ್ನೇ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಮನೋಜ್ ಸಿಂಹ ಹೇಳಿದ್ದಾರೆ.
ರೈಲುಗಳಲ್ಲಿ ನೀಡುತ್ತಿರುವ ಬೆಡ್‌ಶೀಟ್‌ಗಳು ಗಬ್ಬುನಾತ ಬೀರುತ್ತವೆ ಎಂಬುದರ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಭಾರೀ ಚರ್ಚೆಯಾಗಿತ್ತು. ಈ ಚರ್ಚೆ ಗಂಭೀರ ಸ್ವರೂಪ ಪಡೆದಾಗ ಚೇರ್‌ಮೆನ್ ಹಮೀದ್ ಅನ್ಸಾರಿ ಅವರು ರೈಲು ಪ್ರಯಾಣ ಮಾಡುವಾಗ ಪ್ರಯಾಣಿಕರೇ ಬೆಡ್‌ಶೀಟ್‌ಗಳನ್ನು ತಂದರೆ ಸಮಸ್ಯೆ ಇರಲ್ಲ ಎಂದು ಪ್ರತಿಕ್ರಿಯಿಸಿದ್ದರು.
ನ್ಯಾಷನಲ್ ಇನ್ಸಿಟ್ಯೂಟ್  ಆಫ್ ಫ್ಯಾಷನ್  ಟೆಕ್ನಾಲಜಿ ವಿನ್ಯಾಸಗೊಳಿಸಿರುವ ಈ ಹೊಸ ಬೆಡ್ ಶೀಟ್‌ಗಳು ಹಗುರವಾಗಿದ್ದು, ಪ್ರತೀ ದಿನ ತೊಳೆದರೂ ಬಣ್ಣ ಮಾಸುವುದಿಲ್ಲ ಎಂದು ಹೇಳಲಾಗುತ್ತಿದೆ.
SCROLL FOR NEXT