ನಾಗ್ಪುರ: ಆರ್ ಎಸ್ ಎಸ್ ಅನ್ನು ಇನ್ನು ಮುಂದೆ ಚಡ್ಡಿ ಪಾರ್ಟಿ ಎಂದು ಹಂಗಿಸುವಂತಿಲ್ಲ. ಆರ್‌ಎಸ್‌ಎಸ್ ಖಾಕಿ ಚೆಡ್ಡಿಗಳಿಗೆ ಬದಲಾಗಿ ಕಂದು ಬಣ್ಣದ ಪ್ಯಾಂಟುಗಳನ್ನು ಹೊಸ ಸಮವಸ್ತ್ರವಾಗಿ ಹೊರತಂದಿದೆ.
ನಾಗ್ಪುರದಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭೆಯ ವಾರ್ಷಿಕ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 2010ರಲ್ಲೇ ಈ ವಿಷಯವನ್ನು ಚರ್ಚಿಸಲಾಗಿತ್ತು. ಆದರೆ ಒಮ್ಮತ ಮೂಡಿಬರದಿದ್ದರಿಂದ ಐದು ವರ್ಷಗಳವರೆಗೆ ಮುಂದೂಡಲಾಯಿತು ಎಂದು ಆರ್‌ಎಸ್‌ಎಸ್ ಬೈಯ್ಯಾಜಿ ಜೋಶಿ ಹೇಳಿದ್ದಾರೆ.
1925ರಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದಾಗಿನಿಂದ ಸಡಿಲ ಖಾಕಿ ಚಡ್ಡಿಗಳು ಆರ್‌ಎಸ್‌ಎಸ್ ಕೇಡರ್ ಟ್ರೇಡ್ ಮಾರ್ಕ್ ಆಗಿತ್ತು. ಅದಾದ ಬಳಿಕ ಬಿಳಿಯ ಶರ್ಟ್ ಜಾರಿಗೆ ತರಲಾಯಿತು. 1973ರಲ್ಲಿ ಲೆದರ್ ಬೂಟುಗಳಿಗೆ ಬದಲಿಯಾಗಿ ಉದ್ದದ ಬೂಟುಗಳನ್ನು ತರಲಾಯಿತು. ಬಳಿಕ ರೆಕ್ಸಿನ್ ಬೂಟುಗಳಿಗೆ ಅವಕಾಶ ನೀಡಲಾಯಿತು.