ವಿಜಯ್ ಮಲ್ಯ 
ದೇಶ

ಮಲ್ಯಗೆ ಮತ್ತಷ್ಟು ಸಂಕಷ್ಟ: ಮತ್ತೊಂದು ಜಾಮೀನು ರಹಿತ ವಾರಂಟ್ ಜಾರಿ

ಚೆಕ್ ಬೌನ್ಸ್ ಪ್ರಕರಣದಲ್ಲಿ ಮಲ್ಯ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ನ ಮುಖ್ಯ ಹಣಕಾಸು ಅಧಿಕಾರಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ....

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಮಲ್ಯ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ನ ಮುಖ್ಯ ಹಣಕಾಸು ಅಧಿಕಾರಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.

ಮಾರ್ಚ್ 29 ರ ಒಳಗೆ ಹಾಜರು ಪಡಿಸಬೇಕೆಂದು ಹೇಳಲಾಗಿದೆ. ಮಾರ್ಚ್ 11 ರ ವೇಳೆಗೆ ಮಲ್ಯ ವಿರುದ್ಧ 5 ಜಾಮೀನು ರಹಿತ ವಾರಂಟ್ ಗಳನ್ನು ನೀಡಲಾಗಿತ್ತು. ಈಗ ಅವುಗಳ ಜೊತೆಗೆ ಮತ್ತೊಂದು ಹೊಸ ವಾರಂಟ್ ಸೇರಿದೆ.

ಈ ಹಿಂದೆ ಹೈದರಾಬಾದ್ ಕೋರ್ಟ್ ಕೂಡ ಉದ್ಯಮಿ ಮಲ್ಯಗೆ ನಾನ್ ಬೇಲಬಲ್ ವಾರಂಟ್ ನೀಡಿತ್ತು. ಕಿಂಗ್​ಫಿಷರ್ ಏರ್​ಲೈನ್ಸ್ ನೀಡಿದ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ಜಿಎಂಆರ್ ಗ್ರೂಪ್ ನೀಡಿದ ದೂರಿನ ಮೇಲೆ ಹೈದರಾಬಾದ್ ಕೋರ್ಟ್ ವಾರಂಟ್ ಜಾರಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

ಬೆಂಗಳೂರಿನ ORRಗೆ ಹೈಟೆಕ್ ಟಚ್; ಬಸ್, ಸೈಕಲ್ ಟ್ರ್ಯಾಕ್, ಡೆಲಿವರಿ ಬಾಯ್ಸ್‌ಗೆ ಅತ್ಯಾಧುನಿಕ 'ಗಿಗ್ ಹಬ್ಸ್‌' ನಿರ್ಮಾಣ!

ವಂದೇ ಮಾತರಂ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ!

ಬಾಂಗ್ಲಾದವರ ಬಗ್ಗೆ ಮಾಹಿತಿ ಕೊಟ್ಟ 15 ನಿಮಿಷದಲ್ಲೇ ಭಾರತೀಯನ ವಿರುದ್ಧವೇ ಹಲ್ಲೆ ಕೇಸ್: ನಿಮ್ಮ ಓಲೈಕೆ ನಿಲ್ಲಿಸಿ, ಸರ್ಕಾರಕ್ಕೆ ಹೈಕೋರ್ಟ್ ಚಾಟಿ!

ಪಂಜಾಬ್ ವಿವಿಯಲ್ಲಿ ಘೋರ ದುರಂತ: ಕ್ಯಾಂಪಸ್‌ನಲ್ಲೇ ವಿದ್ಯುತ್ ತಗುಲಿ ಪಿಎಚ್‌ಡಿ ವಿದ್ಯಾರ್ಥಿನಿ ಸಾವು; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ