ಪಂಜಾಬ್ ವಿಧಾನಸಭೆಗೆ ನುಗ್ಗಿದ ಹರ್ಯಾಣ ಶಾಸಕರು! 
ದೇಶ

ಪಂಜಾಬ್ ವಿಧಾನಸಭೆಗೆ ನುಗ್ಗಿದ ಹರ್ಯಾಣ ಶಾಸಕರು!

ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್ ಎಲ್ ಡಿ) ಹರ್ಯಾಣದ 10 ಶಾಸಕರು ಪಂಜಾಬ್ ವಿಧಾನಸಭೆಗೆ ನುಗ್ಗಿದ ಘಟನೆ ಮಾ.17 ರಂದು ನಡೆದಿದೆ.

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್ ಎಲ್ ಡಿ) ಹರ್ಯಾಣದ 10 ಶಾಸಕರು ಪಂಜಾಬ್ ವಿಧಾನಸಭೆಗೆ ನುಗ್ಗಿದ ಘಟನೆ ಮಾ.17 ರಂದು ನಡೆದಿದೆ.

ಸಟ್ಲಜ್ ಯಮುನಾ ಸಂಪರ್ಕ ಕಾಲುವೆಯ ಭೂಮಿಯನ್ನು ಡಿ- ನೊಟಿಫೈ ಮಾಡಿರುವ ಪಂಜಾಬ್ ಸರ್ಕಾರದ ಆದೇಶವನ್ನು ವಾಪಸ್ ಪಡೆಯಬೇಕೆಂದು ಐಎನ್ ಎಲ್ ಡಿ ಶಾಸಕರು ಆಗ್ರಹಿಸಿದ್ದಾರೆ. ಡಿ-ನೊಟಿಫಿಕೇಶನ್ ಆದೇಶದ ಮೂಲಕ ಪಂಜಾಬ್ ಸರ್ಕಾರ ಹರ್ಯಾಣ ಜನತೆಯ ಬೆನ್ನಿಗೆ ಚೂರಿ ಹಾಕಿದೆ. ಇತಿಹಾಸದಲ್ಲಿ ಯಾರೂ ಇಂತಹ ಅಸಾಂವಿಧಾನಿಕ ನಿರ್ಧಾರ ಕೈಗೊಂಡಿಲ್ಲ ಎಂದು ಐಎಲ್ ಡಿ ಶಾಸಕರು ಹೇಳಿದ್ದಾರೆ.

ಪಂಜಾಬ್ ಸರ್ಕಾರದ ನಿರ್ಧಾರದಿಂದ ಉಭಯ ರಾಜ್ಯಗಳ ಸಾಮಾಜಿಕ ಸಂಬಂಧ ಹದಗೆಡಲಿದೆ ಎಂದು ಹರ್ಯಾಣದ ಐಎಲ್ ಡಿ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಸಟ್ಲಜ್ ಯಮುನಾ ಸಂಪರ್ಕ ಕಾಲುವೆಯಲ್ಲಿದ್ದ ಸುಮಾರು 3,928 ಎಕರೆ ಭೂಮಿಯನ್ನು ಡಿನೊಟಿಫೈ ಮಾಡಿದ್ದ ಪಂಜಾಬ್ ಸರ್ಕಾರ ನೊಟಿಫೈ ಮಾಡಿದ್ದ ಭೂಮಿಯನ್ನು ವಾಪಸ್ ಪಡೆಯುವಂತೆ ಪಂಜಾಬ್ ನ ರೈತರಿಗೆ ಸೂಚಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ