ಮುಂಬೈ: ವಿಜಯ ದಶಮಿಯ ನಂತರ ಆರೆಸ್ಸೆಸ್ಸ್ ಹೊಸ ಸಮವಸ್ತ್ರವಾದ ಖಾಕಿ ಪ್ಯಾಂಟ್ಸ್ ಧರಿಸಲಿದೆ ಎಂದು ಸಂಘಚಾಲರ್ (ಕೊಂಕಣ್ ವಿಭಾಗ) ಸತೀಶ್ ಮೋದ್ ಹೇಳಿದ್ದಾರೆ. ಈ ವರ್ಷ ಅಕ್ಟೋಬರ್ 11ಕ್ಕೆ ವಿಜಯ ದಶಮಿ, ಅಂದಿನಿಂದ ಆರೆಸ್ಸೆಸ್ಸ್ ಕಾರ್ಯಕರ್ತರು ಖಾಕಿ ಪ್ಯಾಂಟ್ಸ್ ಧರಿಸಲಿದ್ದಾರೆ.
ಕಾಲದೊಂದಿಗೆ ಬದಲಾವಣೆ ಬಯಸಿ 91 ವರ್ಷ ಹಳೆಯ ಇತಿಹಾಸವಿರುವ ಖಾಕಿ ಚಡ್ಡಿಯ ಸಮವಸ್ತ್ರವನ್ನು ಬದಲಿಸಲು ಆರೆಸ್ಸೆಸ್ ತೀರ್ಮಾನ ಕೈಗೊಂಡಿತ್ತು. ಭಾರತದಾದ್ಯಂತ ಆರೆಸ್ಸೆಸ್‌ಗೆ 56,959 ಶಾಖೆಗಳಿವೆ. ಇದರಲ್ಲಿ 5,500 ಶಾಖೆಗಳು ಕಳೆದ ಒಂದು ವರ್ಷದಲ್ಲಿ ರೂಪುಗೊಂಡವುಗಳಾಗಿವೆ. ಮುಂಬೈ-ಕೊಂಕಣ್ ಪ್ರದೇಶದಲ್ಲಿ 626 ಶಾಖೆಗಳಿವೆ ಎಂದು ಸತೀಶ್ ಮೋದ್ ಹೇಳಿದ್ದಾರೆ.
ಶಾಖೆಗಳ ಸಂಖ್ಯೆ ಏರಿಕೆಯಾಗಲು ಪ್ರಧಾನಿ ಮೋದಿಯವರ ಜನಪ್ರಿಯತೆಯೇ ಕಾರಣವೇ ಎಂದು ಕೇಳಿದಾಗ, ಪ್ರಸ್ತುತ ಪರಿಸ್ಥಿತಿ ನಮಗೆ ಅನುಕೂಲವಾಗಿಲ್ಲ ಎಂಬುದನ್ನು ನಾನು ಅಲ್ಲಗೆಳೆಯುವುದಿಲ್ಲ. ಆದಾಗ್ಯೂ, ಇದಕ್ಕೆ ಮೋದಿ ಒಬ್ಬರೇ ಕಾರಣರಲ್ಲ, 2014ರಲ್ಲಿ ಸರ್ಕಾರ ಅಧಿಕಾರಕ್ಕೇರಿದ್ದರೂ 2012ರಲ್ಲಿ ಈ ಬದಲಾವಣೆಗಳು ಕಾಣತೊಡಗಿದ್ದವು ಎಂದು ಮೋದ್ ಹೇಳಿದ್ದಾರೆ.