ದೆಹಲಿಯಲ್ಲಿ ನಡೆದ ಸಮುದಾಯ ರೇಡಿಯೋ ಸಮ್ಮೇಳನದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ, ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮೊದಲಾದವರು. 
ದೇಶ

ಸಮುದಾಯ ರೇಡಿಯೋಗಳಿಗೆ ಜನರನ್ನು ಸಂಪರ್ಕಿಸುವ ಶಕ್ತಿಯಿದೆ: ಅರುಣ್ ಜೇಟ್ಲಿ

ಎಫ್ ಎಂ ಚಾನೆಲ್ ಗಳ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅವು ಜನರಿಗೆ ತಲುಪುವ ರೀತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ರೇಡಿಯೋ...

ನವದೆಹಲಿ:ಎಫ್ ಎಂ ಚಾನೆಲ್ ಗಳ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅವು ಜನರಿಗೆ ತಲುಪುವ ರೀತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ರೇಡಿಯೋ ಮತ್ತೆ ಜನಮಾನಸವನ್ನು ಹೊಕ್ಕಿದೆ. ರೇಡಿಯೋ ಒಂದು ಉತ್ತಮ ಸಂವಹನ ಮಾಧ್ಯಮ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಮಾಧ್ಯಮದ ಭಿನ್ನರೂಪವಾಗಿ ಸಮುದಾಯ ರೇಡಿಯೋ ಪ್ರಾದೇಶಿಕವಾಗಿ ಅಗತ್ಯವಿರುವ ಮಾಹಿತಿಗಳನ್ನು, ವೈವಿಧ್ಯಮಯ ಸ್ಥಿತಿ, ಸಮಸ್ಯೆಗಳು ಮತ್ತು ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಪರಿಚಯಿಸುತ್ತದೆ ಎಂದು ಅರುಣ್ ಜೇಟ್ಲಿ ಇಂದು ದೆಹಲಿಯಲ್ಲಿ 6ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನ ಉದ್ಘಾಟಿಸಿ ಹೇಳಿದರು.

ಪ್ರಾದೇಶಿಕ ಮಟ್ಟದಲ್ಲಿ ಸಂವಹನದ ಅಗತ್ಯಗಳಿಗೆ ಅನುಗುಣವಾಗಿ ರೇಡಿಯೋ ವಲಯದ ವಿಸ್ತಾರಣೆಗೆ ಅವಕಾಶವಿದೆ. ಕಾರ್ಯಕ್ರಮದಲ್ಲಿ ಅನುಭವ ಮತ್ತು ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಜನರೊಂದಿಗೆ ಸಂಪರ್ಕಿಸುವ ಸಾಮರ್ಥ್ಯವಿದೆ.ಪರಿಣಾಮವಾಗಿ, ರೇಡಿಯೋ ಸಮರ್ಥನೀಯ ಆಧಾರದಲ್ಲಿ ಬೆಳೆಯಲು ಅವಕಾಶ ಒದಗಿದೆ.

ಭವಿಷ್ಯದಲ್ಲಿ ರೇಡಿಯೋ ಸ್ಟೇಷನ್ ಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಜನರಿಗೆ ಜಾಗೃತಿ ಹುಟ್ಟಿಸುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವ ರೇಡಿಯೋ ಮಾಧ್ಯಮಕ್ಕೆ ಅವರು ಅಭಿನಂದನೆ ಸಲ್ಲಿಸಿದರು.

ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಕರ್ನಲ್.ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾತನಾಡಿ, ಸ್ಥಳೀಯ ನಿವಾಸಿಗಳ ಬಲವರ್ಧನೆಗೆ ಸಮುದಾಯ ರೇಡಿಯೋಗಳು ಪ್ರಮುಖ ಸಂವಹನ ಮಾಧ್ಯಮವಾಗಿದೆ. ಸರ್ಕಾರದ ಯೋಜನೆಗಳು ಮತ್ತು ನೀತಿಗಳನ್ನು ಸ್ಥಳೀಯ ನಿವಾಸಿಗಳಿಗೆ ಅವರ ಭಾಷೆಯಲ್ಲಿ ಜನರಿಗೆ ತಲುಪಿಸುವಲ್ಲಿ ರೇಡಿಯೋಗಳ ಪಾತ್ರ ಮಹತ್ವದ್ದಾಗಿದೆ. ಟಿವಿ ವಾಹಿನಿಗಳು ಮತ್ತು ಎಫ್ ಎಂ ರೇಡಿಯೋಗಳಿಂದ ಸಾಧ್ಯವಾಗದಿರುವ ಕೆಲಸಗಳನ್ನು ಸಮುದಾಯ ರೇಡಿಯೋಗಳು ಮಾಡಿವೆ ಎಂದು ಶ್ಲಾಘಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

SCROLL FOR NEXT