ದೇಶ

ಮತ್ತೊಬ್ಬ ಕನ್ಹಯ್ಯ ಹುಟ್ಟದಂತೆ ಪಠ್ಯ ಬದಲಿಸಬೇಕು: ರಾಜಸ್ತಾನ ಸಚಿವ

Shilpa D

ಜೈಪುರ: ಶಾಲಾ ಪಠ್ಯ ಪುಸ್ತಕಗಳಲ್ಲಿ ದೊಟ್ಟ ಮಟ್ಟದ ಬದಲಾವಣೆ ಮಾಡಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಅಳವಡಿಸುವ ಮೂಲಕ ಕನ್ಹಯ್ಯ ಕುಮಾರ್ ಅವರಂತವರು ಮತ್ತೆ ಹುಟ್ಟದಂತೆ ಮಾಡುವ ಅನಿವಾರ್ಯತೆ ಇದೆ ಎಂದು ರಾಜಸ್ತಾನ ಪ್ರಾಥಮಿಕ ಶಿಕ್ಷಣ ಸಚಿವ ವಾಸುದೇವ ದೇವ್ನಾನಿ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯ ಭಾವನೆ ಬೆಳೆಸಲು ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ತರುವ ಅನಿವಾರ್ಯತೆ ಇದೆ ಎಂದು  ವಾಸುದೇವ್ ಹೇಳಿದ್ದಾರೆ.

ರಾಜಸ್ತಾನ ವಿಧಾನ ಸಭೆಯಲ್ಲಿ ಮಾತನಾಡಿದ ಅವರು ಜೆಎನ್ ಯು ಪ್ರಕರಣದ ನಂತರ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಬೆಳೆಸಲು ಸರ್ಕಾರಿ ವಿವಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಸೂಚಿಸಲಾಗಿದೆ ಎಂದು ರಾಜಸ್ತಾನ ಉನ್ನತ ಶಿಕ್ಷಣ ಸಚಿವ ಕಾಳಿ ಚರಣ್ ಸರಾಫ್ ಹೇಳಿದ್ದಾರೆ.


SCROLL FOR NEXT