ದೇಶ

ಗಣಿತ ಪರೀಕ್ಷೆ ಕಷ್ಟವಿತ್ತೆಂದು ಹುಡುಗಿ ಆತ್ಮಹತ್ಯೆ

Sumana Upadhyaya

ಸೇಲಂ: ಗಣಿತ ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕ ಸಿಗಲಿಕ್ಕಿಲ್ಲ ಎಂಬ ಆತಂಕದಿಂದ ಪಿಯುಸಿ ಓದುತ್ತಿದ್ದ ಹುಡುಗಿಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

ಸೇಲಂ ಜಿಲ್ಲೆಯ ಚಿನ್ನಪ್ಪಂಪತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಓದುತ್ತಿದ್ದ 17 ವರ್ಷದ ಹುಡುಗಿ ಕಲಿಕೆಯಲ್ಲಿ ಮುಂದಿದ್ದಳು. ನಿನ್ನೆ ನಡೆದ ಗಣಿತ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದಳು. ಆದರೆ ಪ್ರಶ್ನೆ ಪತ್ರಿಕೆ ಕಷ್ಟವಾಗಿತ್ತು. ಹಾಗಾಗಿ ಪೂರ್ಣ ಅಂಕ ಗಳಿಸಲು ಸಾಧ್ಯವಿಲ್ಲ ಎಂದು ಬೇಸರಪಟ್ಟುಕೊಂಡಿದ್ದಳು.

ಗಣಿತ ಪರೀಕ್ಷೆ ಬರೆದು ಹೊರಬಂದ ಯುವತಿ ಆಕೆಯ ತಾಯಿ ಮತ್ತು ಉಪನ್ಯಾಸಕರೊಬ್ಬರಿಗೆ ಪ್ರಶ್ನೆಪತ್ರಿಕೆ ಕಷ್ಟವಾಗಿತ್ತು ಎಂಬ ಬಗ್ಗೆ ಹೇಳಿದ್ದಳು.

ನಂತರ, ನನಗೆ ಗಣಿತ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ ಎಂದೆನಿಸುತ್ತದೆ, ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಷಕರಿಗೆ ಪತ್ರ ಬರೆದಿಟ್ಟು ಕಳೆದ ರಾತ್ರಿ ಮನೆಯ ತೋಟದಲ್ಲಿದ್ದ ಬಾವಿಗೆ ಹಾರಿದ್ದಾಳೆ.ಶವವನ್ನು ಇಂದು ಮುಂಜಾನೆ ಬಾವಿಯಿಂದ ಮೇಲೆತ್ತಲಾಯಿತು.

SCROLL FOR NEXT