ದೇಶ

ನಾವು ಜಮ್ಮು ಮತ್ತು ಕಾಶ್ಮೀರ ಆಡಳಿತ ಕಾರ್ಯಸೂಚಿಯಲ್ಲಿ ಬದ್ಧವಾಗಿರುತ್ತವೆ: ಅರುಣ್ ಜೇಟ್ಲಿ

Sumana Upadhyaya

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ರಚಿಸಲಾದ ಆಡಳಿತ ಕಾರ್ಯಸೂಚಿಗೆ ಭಾರತೀಯ ಜನತಾ ಪಕ್ಷ ಸಂಪೂರ್ಣವಾಗಿ ಬದ್ಧವಾಗಿರುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಎರಡನೇ ದಿನ ಮಾತನಾಡಿದ ಅವರು, ನಾವು ಅಜೆಂಡಾಕ್ಕೆ ಸಂಪೂರ್ಣ ಬದ್ಧರಾಗಿರುವುದಾಗಿ ಹೇಳಿದ್ದಾರೆ.

ಆದರೆ ನಿರ್ಣಯದಲ್ಲಿ ಮುಖ್ಯವಾಗಿ ರಾಷ್ಟ್ರದ ಭದ್ರತೆ ವಿಚಾರದಲ್ಲಿ ಜಮ್ಮು-ಕಾಶ್ಮೀರ ಕುರಿತು ಉಲ್ಲೇಖವಿದೆ ಎಂದು ಹೇಳಿದರು.

ಜೆಎನ್ ಯು ವಿವಾದ ಕುರಿತಂತೆ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಮೊದಲ ದಿನ ಕೆಲವರು ಬಂದು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರೂ, ಇಡೀ ಚರ್ಚೆಯಲ್ಲಿ ಎಡಪಂಥೀಯ ಧೋರಣೆ ಪ್ರಮುಖವಾಗಿತ್ತು. ನಿಜವಾಗಿ ಹೇಳಬೇಕೆಂದರೆ ಅಲ್ಪಸಂಖ್ಯಾತ ಸಮುದಾಯದ ನಾಯಕರು ಮಾತನಾಡಲು ಮುಂದೆ ಬರಲಿಲ್ಲ. ಹೆಚ್ಚಿನವರು ಆ ಚರ್ಚೆಯಲ್ಲಿ ಭಾದವಹಿಸಲಿಲ್ಲ ಮತ್ತು ತಮ್ಮ ಅಭಿಪ್ರಾಯಗಳನ್ನು ಹೇಳಿಲ್ಲ ಎಂದರು.

ರಾಷ್ಟ್ರೀಯತೆಯ ಸಿದ್ಧಾಂತವು ಬಿಜೆಪಿಗೆ ಶಕ್ತಿ ಚಾಲನೆಯಾಗಿದೆ. ರಾಷ್ಟ್ರೀಯತೆ ಜೊತೆಗೆ ವಾಕ್ ಸ್ವಾತಂತ್ರ್ಯ ಕೂಡ ಸೇರಿಕೊಳ್ಳುತ್ತದೆ. ನಮ್ಮ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಸಮ್ಮತಿ ಸೂಚಿಸಲು ಅವಕಾಶವಿದ್ದರೂ ಕೂಡ ರಾಷ್ಟ್ರವನ್ನು ನಾಶ ಪಡಿಸಲು ಅದು ಅವಕಾಶ ಕೊಡುವುದಿಲ್ಲ ಎಂದು ಜೇಟ್ಲಿ ಹೇಳಿದರು.

SCROLL FOR NEXT