ಹಿಮಪಾತದಲ್ಲಿ ಕಣ್ಮರೆಯಾಗಿದ್ದ ಯೋಧನ ಮೃತದೇಹ ಪತ್ತೆ 
ದೇಶ

ಹಿಮಪಾತದಲ್ಲಿ ಕಣ್ಮರೆಯಾಗಿದ್ದ ಯೋಧನ ಮೃತದೇಹ ಪತ್ತೆ

ಜಮ್ಮ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ಯೋಧನ ಮೃತದೇಹವನ್ನು ಸೇನಾ ರಕ್ಷಣಾ ತಂಡವು ಪತ್ತೆ ಹಚ್ಚಿದ್ದು...

ನವದೆಹಲಿ: ಜಮ್ಮ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ಯೋಧನ ಮೃತದೇಹವನ್ನು ಸೇನಾ ರಕ್ಷಣಾ ತಂಡವು ಪತ್ತೆ ಹಚ್ಚಿದ್ದು ಮೃತದೇಹವನ್ನು ಭಾನುವಾರ ಹೊರತೆಗೆದಿದ್ದಾರೆಂದು ತಿಳಿದುಬಂದಿದೆ.

ಮಾರ್ಚ್ 17 ರಂದು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ 17,500 ಅಡಿ ಎತ್ತರದಲ್ಲಿ ಇಬ್ಬರು ಯೋಧರು ಗಡಿ ಕಾಯುತ್ತಿದ್ದರು ಈ ವೇಳೆ ಹಿಮಪಾತ ಸಂಭವಿಸಿತ್ತು. ಹಿಮಪಾತದಲ್ಲಿ ಇಬ್ಬರು ಯೋಧರು ಕಣ್ಮರೆಯಾಗಿದ್ದರು. ನಂತರ ಓರ್ವ ಯೋಧನನ್ನು ಸಂರಕ್ಷಿಸಲಾಗಿತ್ತು. ಮತ್ತೊಬ್ಬ ಯೋಧನಿಗಾಗಿ ಸೇನಾ ರಕ್ಷಣಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿತ್ತು.

ಕಳೆದ 3 ದಿನಗಳಿಂದ ಪ್ರತಿಕೂಲ ಹವಾಮಾನದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಇದರಂತೆ ನಿನ್ನೆ ಶ್ವಾನಪಡೆ, ರಾಡಾರ್ ಹಾಗೂ ಲೋಹಶೋಧಕ ಉಪಕರಣಗಳನ್ನು ಬಳಸುವ ಮೂಲಕ ರಕ್ಷಣಾ ಪಡೆ ಸಿಬ್ಬಂದಿಗಳು ಯೋಧನನ್ನು ಪತ್ತೆಹಚ್ಚಿದ್ದರು.

ಸತತ ಮೂರನೇ ದಿನ ನಡೆದ ಕಾರ್ಯಾಚರಣೆಯಲ್ಲಿ 12 ಅಡಿ ಆಳದಲ್ಲಿ ಸಿಲುಕಿದ್ದ ಯೋಧ ಪಿ. ವಿಜಯ್ ಕುಮಾರ್ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಮಾಡಿದ್ದಾರೆ.

ಹುತಾತ್ಮ ಯೋಧ ಕೆ. ವಿಜಯ್ ಕುಮಾರ್ ಅವರು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲಾರಾಮಪುರಂ ಗ್ರಾಮದವರಾಗಿದ್ದು, ಷೋಷಕರು ಹಾಗೂ ಇಬ್ಬರು ತಂಗಿಯರನ್ನು ಅಗಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಬುಡಕ್ಕೇ ಬಂದ ಟ್ರಂಪ್: Hormuz ಬಳಿಕ Malacca ಮೇಲೂ ಅಮೆರಿಕ ಕಣ್ಣು, ಮೋದಿಗೆ ಹೊಸ ತಲೆನೋವು..!

ಬಿಹಾರ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅಧಿಕಾರ ಸ್ವೀಕಾರ-Video

US-Iran Peace Talks: ಶೀಘ್ರದಲ್ಲೇ ಯುದ್ಧ ಅಂತ್ಯ; ಸುಳಿವು ಕೊಟ್ಟ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

US-Iran Peace Talks: ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರೆದ ಉದ್ವಿಗ್ನತೆ; ಇರಾನ್‌-ಅಮೆರಿಕಾ ನಡುವೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಇದು ಅಪಾಯಕಾರಿ-ಬೇಜವಾಬ್ದಾರಿ ನಡೆ; ಅಮೆರಿಕಾ ವಿರುದ್ಧ ಚೀನಾ ಕಿಡಿ

SCROLL FOR NEXT