ದೇಶ

ನಟ ಕಲಾಭವನ್ ಮಣಿಯದ್ದು ಅಸಹಜ ಸಾವು ಅಲ್ಲ

Rashmi Kasaragodu
ಕೊಚ್ಚಿ: ಮಲಯಾಳಂನ ಖ್ಯಾತ ನಟ ಕಲಾಭವನ್ ಮಣಿಯ ಮೃತದೇಹದಲ್ಲಿ ಕೀಟನಾಶಕ ಮತ್ತು ಮಿಥೆನಾಲ್ ಪತ್ತೆಯಾಗಿತ್ತು ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ತೀವ್ರವಾದ ಕರುಳು ರೋಗ ಮತ್ತು ಕಿಡ್ನಿ ವೈಫಲ್ಯದಿಂದ ಮಣಿ ಬಳಲುತ್ತಿದ್ದು, ಇದರೊಂದಿಗೆ ವಿಷವೂ ಸೇರಿರುವುದರೇ ಮಣಿಯ ಮರಣಕ್ಕೆ ಕಾರಣವಾಗಿದೆ. 
ಅಂದ ಹಾಗೆ ಕೀಟನಾಶಕವು ಆಹಾರದ ಮೂಲಕ ಸೇವನೆಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಕಲಾಭವನ್ ಮಣಿಯದ್ದು ಅಸಹಜ ಸಾವು ಅಲ್ಲ ಎಂದು ವೈದ್ಯರು ಪೊಲೀಸರಲ್ಲಿ ಹೇಳಿದ್ದಾರೆ.  ಮಣಿ ದಿನಾ ಅರೆ ಪ್ರಜ್ಞಾವಸ್ಥೆಯಲ್ಲೇ ಔಷಧಿ ಸೇವನೆ ಮಾಡುತ್ತಿದ್ದರು ಎಂದು ಮಣಿಯನ್ನು ಚಿಕಿತ್ಸೆಗೆ ಒಳಪಡಿಸಿದ್ದ ವೈದ್ಯರು ಹೇಳಿದ್ದರು.
ಮಣಿಯ ಸಾವು ಬಗ್ಗೆ  ಹಲವಾರು ಊಹಾಪೋಹಗಳೆದ್ದಿದ್ದರೂ, ಇದೀಗ ಮಣಿಯದ್ದು ಸಹಜ ಮರಣವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ತೀವ್ರವಾಗ ಕರುಳು ರೋಗವೇ  ಮರಣಕ್ಕೆ ಕಾರಣ ಎಂದು ಫಾರೆನ್ಸಿಕ್ ತಜ್ಞರು ಹೇಳಿರುವುದರಿಂದ ಮಣಿ ಸಾವಿನಲ್ಲಿ ಯಾವುದೇ ನಿಗೂಢತೆ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
SCROLL FOR NEXT