ಪಠಾಣ್ ಕೋಟ್: ನಾಪತ್ತೆಯಾಗಿದ್ದ ಕಾರು ಪತ್ತೆ 
ದೇಶ

ಪಠಾಣ್ ಕೋಟ್: ನಾಪತ್ತೆಯಾಗಿದ್ದ ಕಾರು ಪತ್ತೆ

ಜಮ್ಮು ಮತ್ತು ಕಾಶ್ಮೀರ ಗಡಿಗೆ ಹೊಂದಿಕೊಂಡಿರುವ ಪಂಜಾಬ್ ನ ಸುಜನ್​ಪುರ್​ದ ಪಠಾಣ್ ಕೋಟ್ ನಲ್ಲಿ ಕಾಣೆಯಾಗಿದೆ ಎಂದು ಹೇಳಲಾಗುತ್ತಿದ್ದ...

ಪಠಾಣ್​ಕೋಟ್: ಜಮ್ಮು ಮತ್ತು ಕಾಶ್ಮೀರ ಗಡಿಗೆ ಹೊಂದಿಕೊಂಡಿರುವ ಪಂಜಾಬ್ ನ ಸುಜನ್​ಪುರ್​ದ ಪಠಾಣ್ ಕೋಟ್ ನಲ್ಲಿ ಕಾಣೆಯಾಗಿದೆ ಎಂದು ಹೇಳಲಾಗುತ್ತಿದ್ದ ಕಾರೊಂದು ಇದೀಗ ಪತ್ತೆಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ.

ಸುಜನ್ ಪುರ್ ಸಮಾಪ ಪಠಾಣ್ ಕೋಟ್-ಜಮ್ಮು ಹೆದ್ದಾರಿಯಲ್ಲಿ ಲಿಫ್ಟ್ ಕೇಳುವ ನೆಪದಲ್ಲಿ ಮೂವರು ವ್ಯಕ್ತಿಗಳು ನಿಂತಿದ್ದರು. ಈ ವೇಳೆ ಕಾರು ನಿಲ್ಲಿಸಿ ಕಿಟಿಕಿಯನ್ನು ತೆಗೆದುಯುತ್ತಿದ್ದಂತೆ ಬೆದರಿಸಿ ಪಿಬಿ06 ಎಸ್8982 ನಂಬರಿನ ಕಾರನ್ನು ಅಪಹರಿಸಿದ್ದರು ಗೌರವ್ ಪಥಾನ್ಯಾ ಎಂಬುವವರು ಹೇಳಿಕೊಂಡಿದ್ದರು.

ಈ ಹಿಂದೆ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅಧಿಕಾರಿಯೊಬ್ಬ ಕಾರನ್ನು ಅಪಹರಿಸಲಾಗಿತ್ತು. ಕಾರು ಅಪಹರಣವಾದ ಕೆಲವು ದಿನಗಳಲ್ಲೇ ಉಗ್ರರು ವಾಯುನೆಲೆ ಮೇಲೆ ದಾಳಿ ಮಾಡಿದ್ದರು.

ಇದರಂತೆ ಮತ್ತೆ ಇಂತಹದ್ದೇ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ನಂತರ ಪೊಲೀಸರು ಕಾರು ಪತ್ತೆಯಾಗಿ ತನಿಖೆ ಆರಂಭಿಸಿದ್ದರು. ಪ್ರಸ್ತುತ ನಾಪತ್ತೆಯಾಗಿದ್ದ ಕಾರು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಅಪಹರಣಕಾರರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಭುಗಿಲೆದ್ದ ನಾಯಕತ್ವ ಬದಲಾವಣೆ ಚರ್ಚೆ: ಯತೀಂದ್ರ ಹೇಳಿದ ಮೇಲೆ ಮುಗೀತು- ಡಿಕೆಶಿ ಟಾಂಗ್

ಪ್ರಸಕ್ತ ಸಾಲಿನ ಅಂತಿಮ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ

'ಗಾಂಧಿಯ ಅಹಿಂಸಾ ತತ್ವಕ್ಕೆ ಬಿಜೆಪಿ ಅವಮಾನ; 'ಗೋದಿ ಮಾಧ್ಯಮ' ಈ ಜಾಹೀರಾತು ಪ್ರಕಟಿಸಬಾರದಿತ್ತು'

ಚೆನ್ನೈನಲ್ಲಿ ಭಾರಿ ಪ್ರಮಾಣದಲ್ಲಿ ಕಾಗೆಗಳ ಸಾವು; ಹೈ ಅಲರ್ಟ್ ಘೋಷಣೆ

U19 World Cup 2026 Final: 80 ಎಸೆತಗಳಲ್ಲಿ 175 ರನ್; ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ, ದಾಖಲೆಗಳ ಸುರಿಮಳೆ!

SCROLL FOR NEXT