ಕನ್ಹಯ್ಯ ಕುಮಾರ್ 
ದೇಶ

ವಿಶ್ವವಿದ್ಯಾನಿಲಯಗಳ ಮೇಲೆ ಆಕ್ರಮಣ ನಡೆಸಲಾಗುತ್ತಿದೆ: ಕನ್ಹಯ್ಯ ಕುಮಾರ್

ವಿಶ್ವವಿದ್ಯಾನಿಲಯಗಳನ್ನು ಗಂಭೀರ ಚಿಂತನೆಗಳನ್ನು ಉತ್ತೇಜಿಸುವ ಕೇಂದ್ರಗಳೆಂದು ಹೇಳಿರುವ ಜೆಎನ್ ಯು ವಿವಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್...

ಹೈದರಾಬಾದ್: ವಿಶ್ವವಿದ್ಯಾನಿಲಯಗಳನ್ನು  ಗಂಭೀರ ಚಿಂತನೆಗಳನ್ನು ಉತ್ತೇಜಿಸುವ ಕೇಂದ್ರಗಳೆಂದು ಹೇಳಿರುವ ಜೆಎನ್ ಯು ವಿವಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್, ವಿಶ್ವವಿದ್ಯಾನಿಲಯಗಳು ಆಕ್ರಮಣಕ್ಕೆ ಗುರಿಯಾಗುತ್ತಿವೆ ಎಂದು ಆರೋಪಿಸಿದ್ದಾನೆ.

ಹೈದರಾಬಾದ್ ಗೆ ಭೇಟಿ ನೀಡಿ ಮಾತನಾಡಿರುವ  ಕನ್ಹಯ್ಯ ಕುಮಾರ್" ನಾವು ರಾಜಕೀಯ ಮಾಡುತ್ತಿದ್ದೇವೆಂಬ ಆರೋಪ ಕೇಳಿಬಂದಿದೆ. ರಾಜಕೀಯ ಮಾಡುತ್ತಿರುವುದು ನಾವೋ ಅಥವಾ ಸರ್ಕಾರವೋ ಎಂದು ಕನ್ಹಯ್ಯ ಕುಮಾರ್ ಪ್ರಶ್ನಿಸಿದ್ದು, ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ನಾಶ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದಾನೆ.

ಬುದ್ಧಿಜೀವಿಗಳ ಹಾಗೂ ವಿಶ್ವವಿದ್ಯಾನಿಲಯಗಳ ಕೆಲಸ ಗಂಭೀರ ಚಿಂತನೆಯನ್ನು ಉತ್ತೇಜಿಸುವುದು, ಹೈದರಾಬಾದ್ ವಿಶ್ವವಿದ್ಯಾನಿಲಯ ಹಾಗೂ ಜೆಎನ್ ಯು ನಡುವೆ ಸಾಮ್ಯತೆ ಇದೆ ಎರಡೂ ವಿವಿಗಳನ್ನು ದಾಳಿಗೆ ಗುರಿಮಾಡಲಾಗುತ್ತಿದೆ ಎಂದು ಕನ್ಹಯ್ಯ ಕುಮಾರ್ ಆರೋಪಿಸಿದ್ದಾನೆ. ಭಾಷಣದ ವೇಳೆ ವ್ಯಕ್ತಿಯೊಬ್ಬ ಕನ್ಹಯ್ಯ ಕುಮಾರ್ ಮೇಲೆ ಶೂ ಎಸೆದಿರುವ ಘಟನೆಯು ವರದಿಯಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ರಕ್ಷಣಾ ಕಾರ್ಯಾಚರಣೆ ಆರಂಭ

ಆಪರೇಷನ್‌ ಕಮಲದ ಆತಂಕ: ಅಸ್ಸಾಂ ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿಕೆ ಶಿವಕುಮಾರ್

ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಭರ್ಜರಿ ಗಿಫ್ಟ್: ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಬೋನಸ್; ಡಿ.ಕೆ. ಸುರೇಶ್

'ಕುಮಾರಸ್ವಾಮಿಯನ್ನು ಮೋದಿ- ಶಾ CM ಮಾಡ್ತಾರಂತೆ, ನಿಮ್ಮ ಹಣೆಬರಹ ಏನು? ಹಗಲುಗನಸು ಕಾಣಬೇಡಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೆ ಅಧಿಕಾರ'

ಕೇಂದ್ರದ ಮೇಲೆ ಆರೋಪ ಮಾಡಿ ವೈಫಲ್ಯ ಮರೆಮಾಚುವ ಯತ್ನ, ಜನಸೇವೆ ಸುವರ್ಣಾವಕಾಶ ಕಳೆದುಕೊಂಡ ಸಿದ್ದರಾಮಯ್ಯ: ವಿಜಯೇಂದ್ರ ವಾಗ್ದಾಳಿ

SCROLL FOR NEXT