ದೇಶ

ಗೂಗಲ್ ಮ್ಯಾಪ್ಸ್ ನಲ್ಲಿ ಜೆಎನ್ ಯು 'ರಾಷ್ಟ್ರ ವಿರೋಧಿ'

Mainashree
ನವದೆಹಲಿ: ಗೂಗಲ್ ಮ್ಯಾಪ್ ನಲ್ಲಿ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ವನ್ನು ರಾಷ್ಟ್ರ ವಿರೋಧಿ ಎಂದು ತೋರಿಸಲಾಗಿದೆ. 
ಗೂಗಲ್ ಮ್ಯಾಪ್ ಅಪ್ಲಿಕೇಶನ್ ನಲ್ಲಿ ಆ್ಯಂಟಿ ನ್ಯಾಷನಲ್(anti national) ಎಂಬ ಪದವನ್ನು ಕೀವರ್ಡಾಗಿ ಬಳಸಲಾಗಿದೆ. 
ಗೂಗಲ್ ಸರ್ಚ್ ಆಪ್ಶನ್ ನಲ್ಲಿ anti national ಎಂಬ ಪದವನ್ನು ಟೈಪ್ ಮಾಡಿ ಸರ್ಚ್ ಮಾಡಿದ ನಂತರ, ಮ್ಯಾಪ್ಸ್ ಟ್ಯಾಬ್ ಕ್ಲಿಕ್ಕಿಸಿದಾಗ, ಜೆಎನ್ ಯು ಕ್ಯಾಂಪಸ್ ನ ಚಿತ್ರ ಮತ್ತು ಸ್ಥಳವನ್ನು ತೋರಿಸಲಾಗುತ್ತಿದೆ.
ಇತ್ತಿಚೆಗೆ ಜೆಎನ್ ಯುನಲ್ಲಿ ನಡೆದ ಕೆಲವು ಕಾರ್ಯಕ್ರಮ ಮತ್ತು ಘಟನೆಗಳಿಂದಾಗಿ ಜೆಎನ್ ಯುನ ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿ ಮತ್ತು ರಾಜದ್ರೋಹ ಆರೋಪಕ್ಕೆ ಸಿಲುಕಿಕೊಂಡಿದ್ದಾರೆ.
ಜೆಎನ್ ಯು ವಿದ್ಯಾರ್ಥಿಗಳಾದ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಮೂವರು ವಿದ್ಯಾರ್ಥಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
SCROLL FOR NEXT