ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡಿನ ತಿರುಪುರದಲ್ಲಿ ದಲಿತರಿಗೆ ಕಲ್ಯಾಣ ಮಂಟಪವೂ ಸಿಗುವುದಿಲ್ಲ!

ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ....

ತಿರುಪುರ: ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಕಾರಿಸುವಂತಹ ಘಟನೆಗಳನ್ನು ಕೇಳಿರುತ್ತೀರಿ, ಆದರೆ ದಲಿತರಿಗೆ ಕಲ್ಯಾಣ ಮಂಟಪಗಳಲ್ಲೂ ಇಂಥಹ ಅನುಭವಗಳಾಗುತ್ತಿವೆ ಎನ್ನುವುದಕ್ಕೆ ತಮಿಳುನಾಡಿನ ತಿರುಪುರದ ಕಲ್ಯಾಣ ಮಂಟಪಗಳು ಸಾಕ್ಷಿಯಾಗಿವೆ.

ತಿರುಪುರದಲ್ಲಿರುವ ಕಂಗಾಯಂನಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ವಿವಾಗವಾಗುವುದಾದರೆ, ವಿವಾಹವಾಗುವವರನ್ನು ದಲಿತರೋ ಅಲ್ಲವೋ ಎಂಬುದನ್ನು ಖಚಿತ್ರಪಡಿಸಿಕೊಳ್ಳುತ್ತಾರೆ ಅಲ್ಲಿನ ಮಾಲೀಕರು, ನಂತರವಷ್ಟೆ ಉಳಿದ ವ್ಯವಹಾರ. ಒಂದು ವೇಳೆ ದಲಿತರಾಗಿದ್ದರೆ ಎಷ್ಟೇ ಹಣ ನೀಡಿದರೂ ಕಲ್ಯಾಣ ಮಂಟಪದಲ್ಲಿ ವಿವಾಹವಾಗುವಂತಿಲ್ಲ.      
ಉತ್ತಮ ತಳಿಗಳ ಹೋರಿಗಳಿಗೆ ಪ್ರಸಿದ್ಧಿ ಪಡೆದಿರುವ ತಿರುಪುರದ ಕಂಗಾಯಂ, ಆಳವಾಗಿ ಬೇರೂರಿದೆ ಜಾತೀಯತೆಗೆ ಪ್ರಸಿದ್ಧಿಯಾಗುತ್ತಿದೆ. ಕಂಗಾಯಂ ನಲ್ಲಿ 20 ಕಲ್ಯಾಣ ಮಂಟಪಗಳಿದ್ದು, ಕೇವಲ ಎರಡು ಕಲ್ಯಾಣಾಮಂಟಪಗಳನ್ನು ಮಾತ್ರ ದಲಿತರಿಗೆ ಬಾಡಿಗೆ ನೀಡಲಾಗುತ್ತಿದೆ. ದಲಿತ ಕುಟುಂಬಗಳ ವಿವಾಹ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪವನ್ನು ಬಾಡಿಗೆ ನೀಡಿದ್ದಕ್ಕಾಗಿ ಅಲ್ಲಿನ ಮಾಲೀಕರು ಬಹಿಷ್ಕರಿಸಿದವರೇ ಈಗ ದಲಿತರಿಗೆ ವಿವಾಹ ಸಮಾರಂಭಗಳಿಗೆ ಸಭಾಂಗಣಗಳನ್ನು ನೀಡುತ್ತಿದ್ದಾರೆ ಎಂದು ದಲಿತ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT