ಅಧಿಕೃತವಾಗಿ ಬಿಜೆಪಿಗೆ ಸೇರಿದ ಶ್ರೀಶಾಂತ್ 
ದೇಶ

ಅಧಿಕೃತವಾಗಿ ಬಿಜೆಪಿಗೆ ಸೇರಿದ ಶ್ರೀಶಾಂತ್

ಕ್ರಿಕೆಟ್ ಲೋಕ ಬಿಟ್ಟು ನಟನೆಯತ್ತ ಗಮನ ಹರಿಸಿದ್ದ ಶ್ರೀಶಾಂತ್ ಇದೀಗ ರಾಜಕೀಯ ಕಣಕ್ಕೆ ಇಳಿದಿದ್ದು, ಶುಕ್ರವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ...

ಕೊಚ್ಚಿ: ಕ್ರಿಕೆಟ್ ಲೋಕ ಬಿಟ್ಟು ನಟನೆಯತ್ತ ಗಮನ ಹರಿಸಿದ್ದ ಶ್ರೀಶಾಂತ್ ಇದೀಗ ರಾಜಕೀಯ ಕಣಕ್ಕೆ ಇಳಿದಿದ್ದು, ಶುಕ್ರವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ನವದೆಹಲಿಯಲ್ಲಿರುವ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಿನ್ನೆ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಶ್ರೀಶಾಂತ್ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ತಿರುವನಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆಂದು ತಿಳಿದುಬಂದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ್ದಾರೆಂಬ ವಿವಾದದಲ್ಲಿ ಸಿಲುಕಿಕೊಂಡು ನ್ಯಾಯಾಲಯದಲ್ಲಿ ಕ್ಲೀನ್ ಪಡೆದಿದ್ದ ಶ್ರೀಶಾಂತ್ ಅವರು, ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರಂತೆ ಸಿನಿಮಾವೊಂದರಲ್ಲಿ ನಟನೆಯನ್ನು ಮಾಡಿದ್ದರು. ಈದೀಗ ರಾಜಕೀಯ ರಂಗಕ್ಕೆ ಕಾಲಿಟ್ಟಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಪಡೆಯುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಕೇರಳದಲ್ಲಿ ಬಿಜೆಪಿ ಉತ್ತಮ ಫಲಿತಾಂಶ ನೀಡುವ ಭರವಸೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ನವದೆಹಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಇದರಂತೆ ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೇರಳ ಅಭ್ಯರ್ಥಿಗಳ ಪಟ್ಟಿಯೊಂದನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

ಸಮಾಜವಾದಿ ಪಕ್ಷಕ್ಕೆ ಶಾಕ್: 25-26 ಸಂಸದರು ಪಕ್ಷ ತೊರೆಯಲು ಸಿದ್ಧ; ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಫೋಟಕ ಹೇಳಿಕೆ..!

ಅಂಗಾಂಗ ದಾನ ದಂಧೆ: ಕೇರಳದಾದ್ಯಂತ ಹಲವು ಆಸ್ಪತ್ರೆ, ನಿವಾಸಗಳ ಮೇಲೆ ED ದಾಳಿ

ಹಿಮಾಚಲದಲ್ಲಿ ಭೀಕರ ಅಪಘಾತ: ಪ್ರಪಾತಕ್ಕೆ ಬಿದ್ದ ಬೊಲೆರೊ; ಏಳು ಮಂದಿ ದುರ್ಮರಣ

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, ತಕ್ಷಣದಿಂದಲೇ Hormuz ಜಲಸಂಧಿ ಓಪನ್‌..!

SCROLL FOR NEXT