ಜಾಟ್ ಸಮುದಾಯ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದ ಸಂದರ್ಭ 
ದೇಶ

ಜಾಟ್ ಸಮುದಾಯಕ್ಕೆ ಮೀಸಲಾತಿ ಮಸೂದೆಗೆ ಹರ್ಯಾಣ ವಿಧಾನಸಭೆ ಅನುಮೋದನೆ

ಜಾಟ್ ಮತ್ತು ಇತರ ನಾಲ್ಕು ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವ ಹರ್ಯಾಣ ಹಿಂದುಳಿದ...

ನವದೆಹಲಿ: ಜಾಟ್ ಮತ್ತು ಇತರ ನಾಲ್ಕು ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವ ಹರ್ಯಾಣ ಹಿಂದುಳಿದ ವರ್ಗಗಳ ಮಸೂದೆ-2016ಗೆ ಹರ್ಯಾಣ ವಿಧಾನಸಭೆ ಮಂಗಳವಾರ ಅನುಮೋದನೆ ನೀಡಿದೆ.

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಮಸೂದೆಯನ್ನು ಸದನದ ಮುಂದೆ ಮಂಡಿಸಿದರು. ಹಿಂದುಳಿದ ವರ್ಗದಲ್ಲೇ ಪ್ರತ್ಯೇಕ ವಿಭಾಗ ಕಲ್ಪಿಸಿ ಅದರ ಮೂಲಕ ಜಾಟ್‌ ಮತ್ತು ಇತರೆ ನಾಲ್ಕು ಸಮುದಾಯಗಳಿಗೆ ಮೀಸಲು ನೀಡಲು ನಿರ್ಧರಿಸಲಾಗಿದೆ.
 
ಇದರನ್ವಯ ಶಿಕ್ಷಣದಲ್ಲಿ ಶೇ.10ರಷ್ಟು ಮತ್ತು ಕ್ಲಾಸ್‌ 3 ಮತ್ತು ಕ್ಲಾಸ್‌ 4 ಸರ್ಕಾರಿ ಉದ್ಯೋಗಳಲ್ಲಿ ಶೇ.10ರಷ್ಟು ಮೀಸಲಾಗಿದೆ, ಕ್ಲಾಸ್‌1 ಮತ್ತು ಕ್ಲಾಸ್‌ 2 ವರ್ಗದಲ್ಲಿ ಶೇ.6ರಷ್ಟು ಮೀಸಲಾಗತಿ ನೀಡಲಾಗುವುದು. ಇದಲ್ಲದೆ ಜಾಟರಿಗೆ ಮೀಸಲು ನೀಡುವುದರ ಜತೆಗೆ ಮತ್ತೂಂದು ಪ್ರತ್ಯೇಕ ಮಸೂದೆಯನ್ನು ಮಂಡಿಸಿ ಶಾಶ್ವತ ಹರ್ಯಾಣ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಕಳೆದ ಫೆಬ್ರವರಿಯಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಭಾರೀ ಪ್ರತಿಭಟನೆ ನಡೆದಾಗ ಈ ಬಾರಿಯ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಜಾಟ್ ಸಮುದಾಯಕ್ಕೆ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭರವಸೆ ನೀಡಿದ್ದರು. ಅದರಂತೆ ಈ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರಲಾಗಿದೆ.

ಮೀಸಲು ಬೇಡಿಕೆ ಈಡೇರಿಸುವ ಕುರಿತು ಏ.3ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಹೋರಾಟ ಆರಂಭಿಸುವುದಾಗಿ ಜಾಟ್‌ ನಾಯಕರು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ಮಸೂದೆ ಸಿದ್ಧಪಡಿಸಿದ ಅದನ್ನು ಅಂಗೀಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT