ದೇಶ

ಪಾಕಿಸ್ತಾನದಿಂದಲೇ ಮಾಜಿ ನೌಕಾಧಿಕಾರಿ ಜಾಧವ್ ಅಪಹರಣ: ಭಾರತದ ಶಂಕೆ

Vishwanath S

ನವದೆಹಲಿ: ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ರನ್ನು ಬಂಧಿಸಿರುವ ಪಾಕಿಸ್ತಾನ ಭಾರತದ ವಿದೇಶಿ ಬೇಹುಗಾರಿಕಾ ಸಂಸ್ಥೆ ರಾ ಅಧಿಕಾರಿಯಾಗಿ ಜಾಧವ್ ಪಾಕಿಸ್ತಾನ ವಿರುದ್ಧ ಗೂಢಚಾರಿಕೆ ನಡೆಸುತ್ತಿದ್ದರು ಎಂಬ ಪಾಕಿಸ್ತಾನ ಆರೋಪವನ್ನು ತಳ್ಳಿ ಹಾಕಿರುವ ಭಾರತ, ಜಾಧವ್ ರನ್ನು ಪಾಕಿಸ್ತಾನ ಬಂಧಿಸಿಲ್ಲ ಇರಾನ್ ನಿಂದ ಅಪಹರಿಸಿದೆ ಎಂದು ಸಂಶಯ ವ್ಯಕ್ತಪಡಿಸಿದೆ.

ಇದೇ ವೇಳೆ ಪಾಕಿಸ್ತಾನ ಅಧಿಕಾರಿಗಳು ಜಾಧವ್ ರನ್ನು ವಿಚಾರಣೆ ನಡೆಸಿದ ವೇಳೆ ಜಾಧವ್ ಭಾರತ ಪರವಾಗಿ ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದನ್ನು ಭಾರತ ತಳ್ಳಿ ಹಾಕಿದ್ದು, ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಾಸ್ತವವಾಗಿ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.

ಪಾಕಿಸ್ತಾನ ಭಾರತೀಯ ಬೇಹುಗಾರಿಕೆ ಸಂಸ್ಥೆ ರಾ ಅಧಿಕಾರಿ ಎಂದು ಬಂಧಿಸಿರುವ ಜಾಧವ್ ಅವರು ಇರಾನ್ ನಲ್ಲಿ ಕಾರ್ಗೋ ಉದ್ಯಮ ನಡೆಸುತ್ತಿದ್ದಾರೆ ಎಂದು ಭಾರತ ಹೇಳಿದ್ದು, ಜಾಧವ್ ಅವರನ್ನು ಪಾಕಿಸ್ತಾನ ಬಂಧಿಸಿಲ್ಲ, ಅಪಹರಿಸಿದೆ ಎಂದು ಭಾರತ ವಿದೇಶಾಂಕ ಇಲಾಖೆ ಸಂಶಯ ವ್ಯಕ್ತಪಡಿಸಿದೆ.

SCROLL FOR NEXT