ಪಾಟ್ನಾ: ತೃತೀಯ ಲಿಂಗಿಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಸೀಟುಗಳಲ್ಲಿ ಮೀಸಲಾತಿ ನೀಡಲು ಬಿಹಾರ ಸರ್ಕಾರ ತೀರ್ಮಾನಿಸಿದೆ.
ತೃತೀಯ ಲಿಂಗಿಗಳನ್ನು ಸಮಾಜದ ಪ್ರಮುಖ ವಾಹಿನಿಗೆ ಕರೆ ತರಲು ಅವರಿಗೆ ಮೀಸಲಾತಿಯ ಅವಶ್ಯಕತೆ ಇದೆ. ಅವರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಎಲ್ಲಾ ರೀತಿಯ ಅನುಕೂಲ ಕಲ್ಪಿಸಲಾಗುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಲಿಂಗ ಪರಿವರ್ತನೆಗೊಂಡವರಿಗೆ ಮೀಸಲಾತಿ ನೀಡಲಾಗುತ್ತಿದೆ ಎಂದು ಬಿಹಾರ ಸಮಾಜಕಲ್ಯಾಣ ಸಚಿವ ಮಂಜು ವರ್ಮಾ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳಿಗೆ ತೃತೀಯ ಲಿಂಗಿಗಳನ್ನು ಸೇರಿಸಿ, ಅನುಬಂಧ-2 ರಲ್ಲಿ ವಿವರಿಸಲಾಗಿದೆ. ಹೀಗಾಗಿ ಸರ್ಕಾರಿ ಕೆಲಸದಲ್ಲಿ ಅರ್ಹತೆ ಇರುವ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಲಾಗುವುದು. ಹಾಗೆಯೇ ವಿದ್ಯಾ ಸಂಸ್ಥೆಗಳಲ್ಲೂ ದಾಖಲಾತಿ ವೇಳೆೇ ಅವರಿಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.