ರೋಹಿತ್ ಮೆಮುಲಾ ಸ್ಮಾರಕ ಧ್ವಂಸ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು (ಕೃಪೆ: ಪಿಟಿಐ) 
ದೇಶ

ರೋಹಿತ್ ವೆಮುಲಾ ಸ್ಮಾರಕ ಧ್ವಂಸ ಮಾಡಲು ಹೈದ್ರಾಬಾದ್ ವಿವಿ ನಿರ್ಧಾರ?

ರೋಹಿತ್ ವೆಮುಲಾ ಸ್ಮಾರಕವನ್ನು ಧ್ವಂಸಗೊಳಿಸಲು ಹೈದ್ರಾಬಾದ್ ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಜನವರಿ ತಿಂಗಳಲ್ಲಿ ಕಾಲೇಜು ಹಾಸ್ಟೆಲ್‌ನಲ್ಲಿ ....

ಹೈದ್ರಾಬಾದ್: ರೋಹಿತ್ ವೆಮುಲಾ ಸ್ಮಾರಕವನ್ನು ಧ್ವಂಸಗೊಳಿಸಲು ಹೈದ್ರಾಬಾದ್ ವಿಶ್ವವಿದ್ಯಾನಿಲಯ ನಿರ್ಧರಿಸಿದೆ.  ಜನವರಿ ತಿಂಗಳಲ್ಲಿ ಕಾಲೇಜು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ಮೆಮುಲಾಗೆ ಕಾಲೇಜಿನ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿಗಳು ಸ್ಮಾರಕ ನಿರ್ಮಿಸಿದ್ದರು.
ಹೈದ್ರಾಬಾದ್‌ವಿಶ್ವವಿದ್ಯಾಲಯದ ಉಪ ಕುಲಪತಿ ಪಿ. ಅಪ್ಪಾರಾವ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ಯಾಂಪಸ್‌ನೊಳಗಿರುವ ಅನಗತ್ಯ ವಸ್ತುಗಳನ್ನು ಧ್ವಂಸಗೊಳಿಸಲು ತೀರ್ಮಾನಿಸಲಾಗಿತ್ತು. 
ಈ ನಿರ್ಧಾರವನ್ನು ಖಂಡಿಸಿ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ರೋಹಿತ್ ಆತ್ಮಹತ್ಯೆಗೆ ಅಪ್ಪಾ ರಾವ್ ಅವರೇ ಕಾರಣ ಎಂದು ದೂರುತ್ತಿದ್ದಾರೆ. 
ಒಂದು ವೇಳೆ ವಿವಿ ರೋಹಿತ್ ಸ್ಮಾರಕವನ್ನು ಕೆಡವಿದರೆ ನಾವು ಸುಮ್ಮನಿರಲ್ಲ ಎಂದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ನಾಯಕ ಪ್ರಭಾಕರ್ ಎಚ್ಚರಿಕೆ ನೀಡಿದ್ದಾರೆ.
ರೋಹಿತ್ ಮತ್ತು ವಿವಿಯಿಂದ ವಜಾಗೈದ ವಿದ್ಯಾರ್ಥಿಗಳು 13 ದಿನಗಳ ಕಾಲ ಪ್ರತಿಭಟನೆ ಮಾಡಿದ್ದ ಆ ಸ್ಥಳದ ಬಗ್ಗೆ ಶೇ. 95ರಷ್ಟು ವಿದ್ಯಾರ್ಥಿಗಳು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಆ ಸ್ಥಳದಲ್ಲಿ ವಿದ್ಯಾರ್ಥಿಗಳು ಸಿಮೆಂಟ್ ನಿಂದ ಪುಟ್ಟ ಸ್ಮಾರಕವೊಂದನ್ನು ನಿರ್ಮಿಸಿ, ಅಲ್ಲೊಂದು ಟೆಂಟ್ ಹಾಕಿದ್ದಾರೆ. ಇಂತಿರ್ಪ, ಯಾವುದೇ ಕಾರಣಕ್ಕೂ ಮೆಮುಲಾ ಸ್ಮಾರಕವನ್ನು ಧ್ವಂಸ ಮಾಡಲು ನಾವು ಅನುಮತಿಸುವುದಿಲ್ಲ ಎಂದು ಪ್ರಭಾಕರ್ ಹೇಳಿದ್ದಾರೆ.
ಹೈದ್ರಾಬಾದ್ ವಿವಿಯಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆಗೆ ಶರಣಾಗಿದ್ದನು.
ಮಾರ್ಚ್ 22 ರಂದು 2 ತಿಂಗಳ ಕಾಲ ರಜೆ ಮುಗಿಸಿ ವಿವಿಗೆ ಬಂದ ಅಪ್ಪಾ ರಾವ್ ಅವರಿಗೆ ವಿದ್ಯಾರ್ಥಿಗಳು ಛೀಮಾರಿ ಹಾಕಿ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT