ಫ್ಲೈ ಓವರ್ ಕುಸಿತ 
ದೇಶ

ಫ್ಲೈ ಓವರ್ ಕುಸಿತ: ಒಂದೆಡೆ ಗಾಯಾಳುಗಳ ಸಂಕಟ; ಮತ್ತೊಂದೆಡೆ ಸೆಲ್ಫೀಗಾಗಿ ಚೆಲ್ಲಾಟ

ಹೃದಯವಿದ್ರಾವಕ ಘಟನೆಯ ನಡುವೆ ಸೆಲ್ಫಿ ಹುಚ್ಚು ಹೃದಯಹೀನತೆಯನ್ನು ಮೆರೆದಿದೆ!.

ಕೋಲ್ಕತಾ: ಕೋಲ್ಕತಾದಲ್ಲಿ ನಿರ್ಮಾಣಹಂಟದಲ್ಲಿದ್ದ ಮೇಲ್ಸೇತುವೆ ಕುಸಿದಿದ್ದು, ಹಲವರು ಸಂತ್ರಸ್ತರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ಹೃದಯವಿದ್ರಾವಕ ಘಟನೆಯ ನಡುವೆ ಸೆಲ್ಫಿ ಹುಚ್ಚು ಹೃದಯಹೀನತೆಯನ್ನು ಮೆರೆದಿದೆ!.
ಸೇತುವೆ ಕುಸಿದುಬಿದ್ದಿರುವ ಪರಿಣಾಮ ಗಾಯಗೊಂಡಿರುವವರೊಂದಿಗೆ ಕೆಲವು ಯುವಕರ ಗುಂಪು ಸೆಲ್ಫಿ ತೆಗೆಸಿಕೊಳ್ಳಲು ಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವಿವೇಕಾನಂದ ರಸ್ತೆಯಲ್ಲಿ ಕುಸಿದುಬಿದ್ದ ಮೇಲ್ಸೇತುವೆಯಡಿ ಸಿಲುಕಿದವರನ್ನು ಹೊರತೆಗೆಯುತ್ತಿರುವ ದೃಶ್ಯ ಒಂದೆಡೆಯಾದರೆ, ಅವರಿಗೆ ಸಹಾಯ ಮಾಡಬೇಕಿದ್ದ ಯುವಕರ ಗುಂಪೊಂದು ಮುರಿದ ಪಿಲ್ಲರ್ ಗಳ ಮೇಲೆ ಕುಳಿತು ಕೆಲವು ಯುವಕರು ಸೆಲ್ಫಿ ತೆಗೆಯಲು ಯತ್ನಿಸುತ್ತಿದ್ದರಲ್ಲದೇ ಚೆಂದದ ಸೆಳ್ಫಿಗಾಗಿ ತಮ್ಮ ತಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದರು.   
ಸೆಲ್ಫಿ ತೆಗೆಯುವ ಭರದಲ್ಲಿದ್ದ ಯುವಕರು, ಗಾಯಾಳುಗಳನ್ನು ಸಾಗಿಸುವ ಆಂಬುಲೆನ್ಸ್ ಗಳಿಗೆ ಅಡ್ಡ ನಿಂತಿದ್ದರಿಂದ ಪೊಲೀಸರು ಅಕ್ಷರಸಹ ಅವರನ್ನು ಅಂಬುಲೆನ್ಸ್ ಗಳ ಎದುರಿನಿಂದ ಎಳೆದು ಬಾಡಿಗೆ ಸರಿಸಬೇಕಾಯಿತು. ಕೋಲ್ಕತದಾಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದುಬಿದ್ದ ಪರಿಣಾಮ ವಾಹನಗಳು ಕುಸಿದ ಮೇಲ್ಸೇತುವೆ ಅಡಿಯಲ್ಲಿ ಸಿಲುಕಿ 24 ಜನ ಸಾವನ್ನಪ್ಪಿದ್ದರೆ, 90 ಜನರು  ಗಾಯಗೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT