ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುತ್ತಿರುವ ಕಾರು 
ದೇಶ

ಡಿಕ್ಕಿ ಹೊಡೆದು ಬೈಕ್ ಸವಾರನನ್ನು ಅರ್ಧ ಕಿ.ಮೀ ವರೆಗೂ ಎಳೆದೊಯ್ದ ಕಾರು ಚಾಲಕ!

ವೇಗವಾಗಿ ಕಾರು ಚಲಾಯಿಸಿ ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಕಾರಿನ ಬೊನೆಟ್ ಮೇಲೆ ಬಿದ್ದ ಬೈಕ್ ಸವಾರನನ್ನು ಅರ್ಧ ಕಿಲೋಮೀಟರ್ ದೂರದವರೆಗೆ...

ಗುರ್‌ಗಾಂವ್: ವೇಗವಾಗಿ ಕಾರು ಚಲಾಯಿಸಿ ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಕಾರಿನ ಬೊನೆಟ್ ಮೇಲೆ ಬಿದ್ದ ಬೈಕ್ ಸವಾರನನ್ನು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದಿರುವ ಘಟನೆಯೊಂದು ನವದೆಹಲಿಯ ಸಮೀಪದ ಗುರ್‌ಗಾಂವ್ ನಲ್ಲಿ ನಡೆದಿದೆ.

ಮಾರ್ಚ್ 28ರಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಪ್ರತೀಕ್ ಕುಮಾರ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿರುವ ಕಾರು ಚಾಲಕ, ನಂತರ ಕಾರು ನಿಲ್ಲಿಸದೆಯೇ ಕಾರಿನ ಮೇಲೆ ಬಿದ್ದ ಪ್ರತೀಕ್ ನನ್ನು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದಿದ್ದಾನೆ. ಈ ವೇಳೆ ದಾರಿ ಮಧ್ಯದಲ್ಲಿ ಮತ್ತೋರ್ವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಾಗ ಪ್ರತೀಕ್ ಕೆಳಗೆ ಬಿದ್ದಿದ್ದಾರೆ.

ನಾನು ಮತ್ತು ನನ್ನ ಮೂರು ವರ್ಷದ ಮಗು ಸಂಬಂಧಿಕರ ಮನೆಗೆ ಹೋಗುತ್ತಿದ್ದೆವು. ಈ ವೇಳೆ ವೇಗವಾಗಿ ಬರುತ್ತಿದ್ದ ಕಪ್ಪು ಬಣ್ಣದ ಹೊಂಡಾ ಸಿಟಿ ಕಾರೊಂದು ನನ್ನ ಬೈಕ್ ಗೆ ಗುದ್ದಿತು. ಕಾರನ್ನು ನಿಲ್ಲಿಸದ ಚಾಲಕ, ಕಾರಿನ ಬೊನೆಟ್ ಮೇಲೆ ನಾನು ಬಿದ್ದಿದ್ದರೂ ಅರ್ಧ ಕಿ.ಮೀ ದೂರದ ವರೆಗೂ ಎಳೆದೊಯ್ದ.

ಈ ವೇಳೆ ಆತನನ್ನು ಹಿಡಿಯಲು ಯತ್ನಿಸಿದೆ ಆದರೂ ಪರಾರಿಯಾಗಿಬಿಟ್ಟ. ಘಟನೆ ನಂತರ ಪೊಲೀಸರಿಗೆ ದೂರು ನೀಡಲು ಹೋದಾಗ ನನ್ನ ಮೇಲೆ ಯಾವುದೇ ಗಾಯಗಳಾಗದಿರುವುದನ್ನು ಗಮನಿಸಿದ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದರು. ನಂತರ ಸ್ಥಳೀಯ ಅಂಗಡಿಗಳ ಸಿಸಿಟಿವಿ ವಿಡಿಯೋವನ್ನು ಪರಿಶೀಲಿಸಿದೆ. ಈ ವೇಳೆ ವಿಡಿಯೋ ಸಿಕ್ಕಿತ್ತು. ಅಂಗಡಿಗಳ ಮಾಲೀಕರ ಬಳಿ ಮನವಿ ಮಾಡಿ ವಿಡಿಯೋ ಪಡೆದು ದೂರು ದಾಖಲಿಸಲಾಯಿತು ಎಂದು ಪ್ರತೀಕ್ ಹೇಳಿಕೊಂಡಿದ್ದಾರೆ.

ಇದೀಗ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಟ್ರಂಪ್ 48 ಗಂಟೆಗಳ ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಸುರಿಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT