ದೇಶ

ಗೋವಿಂದ ನನ್ನ ವಿರುದ್ಧ ಗೆಲ್ಲಲು ದಾವೂದ್ ನೆರವು ಪಡೆದಿದ್ದರು: ಗವರ್ನರ್ ನಾಯಕ್

Lingaraj Badiger
ಲಖನೌ: 2004ರ ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ನಟ ಗೋವಿಂದ ಅವರು ನನ್ನ ವಿರುದ್ಧ ಗೆಲ್ಲಲು ಭೂಗತಪಾತಕಿ ದಾವೂದ್ ಇಬ್ರಾಹಿಂ ಹಾಗೂ ಬಿಲ್ಡರ್ ಹಿತೆನ್ ಠಾಕೂರ್ ಅವರ ನೆರವು ಪಡೆದಿದ್ದರು ಎಂದು ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಪಾಲ ರಾಮ್ ನಾಯಕ್ ಅವರು ತಾವು ಮರಾಠಿಯಲ್ಲಿ ಬರೆದಿರುವ ತಮ್ಮ ಆತ್ಮಕತೆ ಚೈರೆವೇತಿ, ಚೈರೆವೇತಿ(ಮುಂದೆ ಸಾಗಿ)ಯಲ್ಲಿ ಈ ವಿಷಯ ಬಯಲು ಮಾಡಿದ್ದಾರೆ. ನಾನು ಮೂರು ಬಾರಿ ಸಂಸದನಾಗಿದ್ದೆ, ಆದರೆ ಅದನ್ನು ಗೋವಿಂದನಿಗೆ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭೂಗತ ಪಾತಕಿಯ ನೆರವು ಪಡೆದು ಬಾಲಿವುಡ್ ನನ್ನನ್ನು 11 ಸಾವಿರ ಮತಗಳಿಂದ ಸೋಲಿಸಿದ್ದರು ಎಂದು ದೂರಿದ್ದಾರೆ.
ಕಳೆದ ಏಪ್ರಿಲ್ 25ರಂದು ರಾಮ್ ನಾಯಕ್ ಅವರ ಪುಸ್ತಕ ಮುಂಬೈನಲ್ಲಿ ಬಿಡುಗಡೆಯಾಗಿತ್ತು. ದಾವೂದ್, ಠಾಕೂರ್ ಹಾಗೂ ಗೋವಿಂದ ಗೆಳೆಯರಾಗಿದ್ದಾರೆ. ಹಾಗಾಗಿ ಬಾಲಿವುಡ್ ನಟ ಚುನಾವಣೆಯಲ್ಲಿ ಅವರ ಪ್ರಭಾವ ಬಳಸಿ ಗೆಲುವು ಸಾಧಿಸಿದ್ದರು ಎಂದು ಆರೋಪಿಸಿದ್ದಾರೆ.
SCROLL FOR NEXT