ದೇಶ

ಮಹಾದಾಯಿ ವಿವಾದ ಶೀಘ್ರ ಇತ್ಯರ್ಥಕ್ಕೆ ನ್ಯಾಯಮಂಡಳಿ ಒಪ್ಪಿಗೆ

Mainashree
ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನ್ಯಾಯಾಧಿಕರಣವು ಒಪ್ಪಿಗೆ ಸೂಚಿಸಿದೆ. 
ನ್ಯಾಯಮೂರ್ತಿ ಜೆ ಎಂ ಪಾಂಚಾಲ ಅವರ ನೇತೃತ್ವದ ನ್ಯಾಯಮಂಡಳಿ ಮಹಾದಾಯಿ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದಾಗಿ ತಿಳಿಸಿದೆ.
ಮಹಾದಾಯಿ ನದಿ ವಿವಾದವನ್ನು ಶೀಘ್ರವೇ ಇತ್ಯರ್ಥಪಡಿಸಬೇಕು ಎಂದು ಏಪ್ರಿಲ್ 30ರಂದು ರಾಜ್ಯದ ಪರವಾಗಿ ಅಡ್ವೋಕೇಟ್ ಆನ್ ರೆಕಾರ್ಡ್ ನಿಶಾಂತ್ ಪಾಟೀಲ್ ಮೂರು ಪುಟಗಳ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಮಂಡಳಿ ಅಂಗೀಕರಿಸಿದೆ.
ಇನ್ನು ಮಹಾದಾಯಿ ವಿವಾದವನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ವಿರೋಧವಿಲ್ಲ. ಆದರೆ, ಕರ್ನಾಟಕದಲ್ಲಿ ಬರಗಾಲವಿದೆ ಎಂಬ ವಾದವನ್ನು ಒಪ್ಪುವುದಿಲ್ಲ ಎಂದು ಗೋವಾ ನ್ಯಾಯಮಂಡಳಿಯ ಮುಂದೆ ಸ್ಪಷ್ಟಪಡಿಸಿತು. 
ನ್ಯಾಯಮಂಡಳಿಯು ಗೋವಾ, ಮಹಾರಾಷ್ಟ್ರ ಮತ್ತು ಇತರೆ ಎರಡು ರಾಜ್ಯಗಳು ಒಂದು ವಾರದೊಳಗೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬೇಕು ಎಂದು ನ್ಯಾಯಮಂಡಳಿ ನೋಟೀಸ್ ಜಾರಿ ಮಾಡಿದೆ.
SCROLL FOR NEXT