ಪೆರುಂಬಾವೂರ್: ಎರ್ನಾಕುಲಂ ಜಿಲ್ಲೆಯ ಕಾನೂನು ವಿದ್ಯಾರ್ಥಿನಿ ಜಿಶಾ ಸಂಜೆ 5.45ರ ವೇಳೆಗೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಜಿಶಾ ಸಂಜೆ 5 ಗಂಟೆಗೆ ನೀರು ತೆಗೆದು ಕೊಂಡು ಹೋಗಿದನ್ನು ಅಲ್ಲಿನ ಸ್ಥಳೀಯರು ನೋಡಿದ್ದಾರೆ. ಇದಾಗಿ ಅರ್ಧ ಗಂಟೆಯ ನಂತರ ಜಿಶಾಳ ಮನೆಯಿಂದ ಆರ್ತನಾದ ಕೇಳಿದೆ. ಆಕೆಯನ್ನು ಅತ್ಯಾಚಾರಗೈದ ವ್ಯಕ್ತಿ ಎಂದು ಶಂಕಿಸಲಾಗುತ್ತಿರುವವ ಅಲ್ಲಿನ ಕಾಲುವೆ ಮೂಲಕ ಹೋಗಿದ್ದು 6.05ಕ್ಕೆ. ಹೀಗೆಂದು ಅಲ್ಲಿನ ನಿವಾಸಿಗಳು ಸಾಕ್ಷ್ಯ ನುಡಿದಿದ್ದಾರೆ.
ಜಿಶಾ ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಹೊರ ರಾಜ್ಯದವರಾಗಿದ್ದಾರೆ.
ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ವಿಎಎಂ ಸುಧೀರ್ ಒತ್ತಾಯಿಸಿದ್ದಾರೆ.