ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಯುದ್ಧ ವಿಮಾನ ಸುಖೋಯ್ 30ಎಂಕೆಐಗೆ ಇಂಜಿನ್ ಸಮಸ್ಯೆ: ಕೇಂದ್ರ ಸರ್ಕಾರ

ಭಾರತೀಯ ವಾಯುಸೇನಾ ಪಡೆಯ ಪ್ರಮುಖ ಯುದ್ಧ ವಿಮಾನ ರಷ್ಯಾ ನಿರ್ಮಿತ ಸುಖೋಯ್ 30 ಎಂಕೆಐ ವಿಮಾನಕ್ಕೆ ಇಂಜಿನ್ ಸಮಸ್ಯೆ ಕಾಡುತ್ತಿದೆ ಎಂದು ಕೇಂದ್ರ ಸರ್ಕಾರ...

ಸುಖೋಯ್ 30ಎಂಕೆಐ
Vishwanath S
Updated On : 7 May 2016, 1:17 am

ನವದೆಹಲಿ: ಭಾರತೀಯ ವಾಯುಸೇನಾ ಪಡೆಯ ಪ್ರಮುಖ ಯುದ್ಧ ವಿಮಾನ ರಷ್ಯಾ ನಿರ್ಮಿತ ಸುಖೋಯ್ 30 ಎಂಕೆಐ ವಿಮಾನಕ್ಕೆ ಇಂಜಿನ್ ಸಮಸ್ಯೆ ಕಾಡುತ್ತಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

2014ರ ಏಪ್ರಿಲ್ 1ರಿಂದ ಇಲ್ಲಿಯವರೆಗೂ ಸುಖೋಯ್ ವಿಮಾನಗಳು ಹಾರಾಟ ನಡೆಯುವಾಗಲೇ 34 ಬಾರಿ ಇಂಜಿನ್ ಸಮಸ್ಯೆ ಎದುರಿಸಿದ್ದವು. ಇಂತಹ ಸಂದರ್ಭಗಳಲ್ಲಿ ಒಂದೇ ಇಂಜಿನ್ ನಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಇನ್ನು ಸುಖೋಯ್ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

5 ಸುಖೋಯ್ 30ಎಂಕೆಐ ವಿಮಾನಗಳು 2007ರ ಏಪ್ರಿಲ್ 1 ರಿಂದ 2015ರ ಮಾರ್ಟ್ 31 ನಡುವಣ ಅಪಘಾತಕ್ಕೀಡಾಗಿದ್ದವು. ಅವುಗಳ ಪೈಕಿ 3 ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಕೊಂಡಿದ್ದು ತನಿಖೆಯ ನಂತರ ದೃಢಪಟ್ಟಿವೆ.

ಸುಖೋಯ್ ವಿಮಾನಗಳ ತಾಂತ್ರಿಕ ಸಮಸ್ಯೆ ಕುರಿತಂತೆ ರಷ್ಯಾದೊಂದಿಗೆ ಮಾತುಕತೆ ನಡೆಸಿದ್ದು, ಎಚ್​ಎಎಲ್​ನಲ್ಲಿ ವಿಮಾನಗಳ ಇಂಜಿನ್ ದುರಸ್ತಿ ಮಾಡಲು ಕೆಲವೊಂದು ಸಲಹೆಗಳನ್ನು ನೀಡಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments