ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಹಿರಂಗ ಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆ ಸರ್ಟಿಫಿಕೇಟ್ ನಕಲಿ. ಈ ಮೂಲಕ ಬಿಜೆಪಿ ದೇಶದ ಜನರನ್ನು ಮೋಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಸೋಮವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಪ್ ನಾಯಕ ಅಶುತೋಷ್, ಮೋದಿಯವರ ಶೈಕ್ಷಣಿಕ ಸರ್ಟಿಫಿಕೇಟ್ ನಕಲಿ ಮತ್ತು ಅಲ್ಲಿ ನಮೂದಿಸಿರುವ ಹೆಸರು ಹೊಂದಿಕೆಯಾಗಿಲ್ಲ ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಏನು ಎಂಬುದನ್ನು ಸಾಬೀತು ಪಡಿಸಲಿ ಎಂದು ಹೇಳಿದ್ದಕ್ಕೆ, ಮೋದಿ ಅವರು ದೆಹಲಿ ವಿಶ್ವ ವಿದ್ಯಾಲಯದಿಂದ ಬಿಎ ಮತ್ತು ಗುಜರಾತ್ ವಿಶ್ವ ವಿದ್ಯಾಲಯದಿಂದ ಎಂಎ ಪದವಿ ಗಳಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಸರ್ಟಿಫಿಕೇಟ್‌ಗಳನ್ನು ಅಮಿತ್ ಶಾ ಬಿಡುಗಡೆ ಮಾಡಿದ್ದರು.