ನರೇಂದ್ರ ಮೋದಿ ಪದವಿ ಪ್ರಮಾಣಪತ್ರ ಪ್ರದರ್ಶಿಸುತ್ತಿರುವ ಅಮಿತ್ ಶಾ ಹಾಗೂ ಅರುಣ್ ಜೇಟ್ಲಿ 
ದೇಶ

ಪ್ರಧಾನಿ ಮೋದಿಯವರ ಪ್ರಮಾಣಪತ್ರ ನಕಲಿ ಅಲ್ಲ, ಅಸಲಿ ಎಂದ ದೆಹಲಿ ವಿವಿ

ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಪದವಿ ಪ್ರಮಾಣ ಪತ್ರ ನಕಲಿ ಅಲ್ಲ. ಅದು ಅಸಲಿ ಪ್ರಮಾಣಪತ್ರ ಎಂದು ದೆಹಲಿ ವಿಶ್ವವಿದ್ಯಾಲಯ ಮಂಗಳವಾರ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಪದವಿ ಪ್ರಮಾಣ ಪತ್ರ ನಕಲಿ ಅಲ್ಲ. ಅದು ಅಸಲಿ ಪ್ರಮಾಣಪತ್ರ ಎಂದು ದೆಹಲಿ ವಿಶ್ವವಿದ್ಯಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
ನಿನ್ನೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಸಚಿವ ಅರುಣ್ ಜೇಟ್ಲಿ ಅವರು ಸುದ್ದಿಗೋಷ್ಠಿ ನಡೆಸಿ, ಮೋದಿಯವರ ಬಿ.ಎ ಮತ್ತು ಎಂ.ಎ ಪದವಿಯ ಪ್ರಮಾಣಪತ್ರಗಳನ್ನು ಪ್ರದರ್ಶಿಸಿದ್ದರು. ಆದರೆ ಈ ಪ್ರಮಾಣಪತ್ರಗಳು ನಕಲಿ ಎಂದು ಆರೋಪಿಸಿದ್ದ ಆಪ್ ನಾಯಕರು, ಅದನ್ನು ಪರಿಶೀಲಿಸಲು ಇಂದು ದೆಹಲಿ ವಿವಿಗೆ ಭೇಟಿ ನೀಡಿದ್ದರು.
ಪ್ರಧಾನಿಯವರ ಪದವಿಗೆ ಸಂಬಂಧಿಸಿದಂತೆ ನಮ್ಮ ಬಳಿ ಎಲ್ಲಾ ದಾಖಲೆಗಳಿದ್ದು, 1978ರಲ್ಲಿ ಅವರು ಪದವಿಯನ್ನು ಪಾಸ್ ಮಾಡಿದ್ದಾರೆ  ಮತ್ತು 1979ರಲ್ಲಿ ಪದವಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ದೆಹಲಿ ವಿವಿ ಕುಲಸಚಿವ ತರುಣ್ ದಾಸ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಅಂಕಪಟ್ಟಿಯಲ್ಲಿ ಒಟ್ಟು ಅಂಕಗಳಲ್ಲಿನ ವ್ಯತ್ಯಾಸ ಹಾಗೂ 1979ರಲ್ಲಿ ಅಂಕಪಟ್ಟಿಯಲ್ಲಿನ ಅಂಕಗಳನ್ನು ಟೈಪ್ ಮಾಡುತ್ತಿರಲಿಲ್ಲ. ಆದರೆ ಇದರಲ್ಲಿ ಟೈಪ್ ಮಾಡಲಾಗಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ದಾಸ್, ಎಲ್ಲಾ ವ್ಯತ್ಯಾಸಗಳಿಗೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಅದು ಅಸಲಿ ಪ್ರಮಾಣಪತ್ರ ಎಂದಷ್ಟೇ ಹೇಳಿದ್ದಾರೆ.
ಆಪ್ ನಾಯಕರು ದೆಹಲಿ ವಿವಿಗೆ ಭೇಟಿ ನೀಡಿದ ಕೆಲವೇ ಗಂಟೆಗಳಲ್ಲಿ ವಿವಿ ಈ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video