ರಾಂಚಿ: ಜಾರ್ಖಂಡ್ ನಲ್ಲಿ ಅನಾಮಿಕ ದುಷ್ಕರ್ಮಿಗಳು ಪತ್ರಕರ್ತರೋಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದ ಐವರು ಅನಾಮಿಕ ವ್ಯಕ್ತಿಗಳು ಐಸು ಸುತ್ತು ಗುಂಡು ಹಾರಿಸುವ ಮೂಲಕ ಛತ್ರಾ ಜಿಲ್ಲೆಯ ಮೂಲದ ಪತ್ರಕರ್ತ ಇಂದ್ರದೇವೋ ಯಾದವ್ ಅವರನ್ನು ಗುರುವಾರ ರಾತ್ರಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಇಂದ್ರದೇವೋ ಯಾದವ್ ಅವರು ಕಚೇರಿಯಿಂದ ಮನೆಗೆ ವಾಪಸ್ ಬರುತ್ತಿರಬೇಕಾದರೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜಾರ್ಖಂಡ್ ಪತ್ರಕರ್ತ ಸಂಘ ಹಾಗೂ ಜರ್ನಲಿಸ್ಟ್ ವಿಚಾರ ಮಂಚ್ ಹಾಗೂ ಇನ್ನೂ ಅನೇಕ ಸಂಘಟನೆಗಳು ಪತ್ರಕರ್ತರ ಹತ್ಯೆಯನ್ನು ಖಂಡಿಸಿವೆ.
ಪತ್ರಕರ್ತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಹಾಗೂ 50 ಲಕ್ಷ ರೂಪಾಯಿಗಳನ್ನು ಮೃತ ಕುಟುಂಬಕ್ಕೆ ಪರಿಹಾರವಾಗಿ ನೀಡಬೇಕೆಂದು ಜಾರ್ಖಂಡ್ ಪತ್ರಕರ್ತರ ಸಂಘಟನೆ ಒತ್ತಾಯಿಸಿದೆ.