ದೇಶ

ಮಾಲೇಗಾಂವ್ ಸ್ಫೋಟ ಪ್ರಕರಣ ಚಾರ್ಜ್ ಶೀಟ್: ಸಾದ್ವಿ ಪ್ರಗ್ಯಾಗೆ ಕ್ಲೀನ್ ಚಿಟ್

Srinivas Rao BV

ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಮುಂಬೈ ಕೋರ್ಟ್ ಗೆ ಚಾರ್ಜ್ ಶೀಟ್( ಆರೋಪ ಪಟ್ಟಿ) ಸಲ್ಲಿಸಿದ್ದು  ಪ್ರಮುಖ ಆರೋಪಿಯಾಗಿದ್ದ  ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಹೆಸರನ್ನು ಆರೋಪ ಪಟ್ಟಿಯಿಂದ ಕೈ ಬಿಟ್ಟಿದೆ.

ಸ್ಫೋಟ ಪ್ರಕರಣದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ ಅವರು ಭಾಗಿಯಾಗಿದ್ದರು ಎನ್ನುವುದನ್ನು ಸಾಬೀತುಪಡಿಸುವ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಎನ್ ಐಎ ತನಿಖಾ ತಂಡ ಕೋರ್ಟ್ ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸ್ಪಷ್ಟಪಡಿಸಿದೆ. ಎನ್ ಐಎ ತನಿಖಾ ತಂಡ ಚಾರ್ಜ್ ಶೀಟ್  ಹೆಸರನ್ನು ಕೈಬಿಟ್ಟಿರುವುದರಿಂದ ಹಲವು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ನಿಂದ ಸಾದ್ವಿ ಪ್ರಗ್ಯಾ ಸಿಂಗ್ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಕರ್ನಲ್ ಪ್ರಸಾದ್ ಪುರೋಹಿತ್ ಅವರ ವಿರುದ್ಧದ ಸಾಕ್ಷ್ಯಗಳು ಸಹ ತಯಾರಿಲ್ಪಟ್ಟಿತ್ತು ಎಂದು ಎನ್ಐಎ ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹೇಳಿದೆ. ಈ ಪ್ರಕರಣದ ಆರೋಪಿಗಳಾಗಿ ಸಾಧ್ವಿ ಪ್ರಗ್ಯಾ ಸಿಂಗ್, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಮೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು. ಈಗ ಆರೋಪಗಳೆಲ್ಲಾ ತಿರಸ್ಕರಿಸಲ್ಪಟ್ಟಿರುವುದರಿಂದ ಸಾದ್ವಿ ಪ್ರಗ್ಯಾ ಸಿಂಗ್, ಪ್ರಸಾದ್ ಪುರೋಹಿತ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

SCROLL FOR NEXT